ಮೈಸೂರು:ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ರೂವಾರಿಗಳಾದ ಗಜಪಡೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಬುಧವಾರ ಬೆಳಗ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಅರಮನೆ ಅಂಗಳಕ್ಕೆ ಸ್ವಾಗತಿಸಲಾಯಿತು. ಈ ಮೂಲಕ ಅರಮನೆ ಅಂಗಳದಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿತು.
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದು ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದ ಅಭಿಮನ್ಯು ನೇತೃತ್ವದ ಗಜಪಡೆಗೆ 9.20ರಿಂದ 10ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಪುಷ್ಪವೃಷ್ಟಿ ಮಾಡಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಅರಮನೆಗೆ ಬರಮಾಡಿಕೊಳ್ಳಲಾಯಿತು.
ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಹಾಗೂ ಲಕ್ಷ್ಮೀ ಆನೆಗಳಿಗೆ ಪುರೋಹಿತರಾದ ಪ್ರಹ್ಲಾದ್‌ರಾವ್ ಗಜಪಡೆಯ ಪಾದ ತೊಳೆದು ಅರಿಶಿಣ- ಕುಂಕುಮ ಇಟ್ಟು ಮಂಗಳಾರತಿ ಮಾಡಿ ಇಡುಗಾಯಿ ಹೊಡೆದರು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಸಚಿವರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ದ್ವಾರದ ಕಟ್ಟಡದಲ್ಲಿ ನಿಂತಿದ್ದ ಸಿಬ್ಬಂದಿ ಪುಷ್ಪ ಮಳೆ ಸುರಿಸಿದರು. ಬೆಲ್ಲ, ಕಬ್ಬು, ತೆಂಗಿನಕಾಯಿ ಸೇರಿ ಇನ್ನಿತರ ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿದರು. ಬಳಿಕ, ನಗರ ಪೊಲೀಸ್ ವಾದ್ಯದವರು ಸಂಗೀತ ನುಡಿಸಿದ ಬಳಿಕ ಇನ್​ಸ್ಪೆಕ್ಟರ್ ಅವರು ಆನೆಗಳು ಮತ್ತು ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ತೇಜಸ್ವಿ ಸೂರ್ಯಗೆ ಒಳ್ಳೇ ಬುದ್ಧಿ ಬರಲೆಂದು ವಿಶೇಷ ಪೂಜೆ! ಪ್ರಸಾದ ತಲುಪಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸರು…

ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಡೆತ್​ನೋಟ್​ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದ ದಿನವೇ ದುರಂತ ಅಂತ್ಯ

ಒಂದೇ ಒಂದು ಸುಳ್ಳು ಹೇಳಿ ಮದ್ವೆ ಮಾಡಿದ್ದಕ್ಕೆ 11 ಮಂದಿಗೆ ಎದುರಾಯ್ತು ಸಂಕಷ್ಟ! ಬೀಗರ ಊಟದಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fifteen =
Remember me
