ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯ ಸಂಭ್ರಮದ ದೃಶ್ಯವನ್ನ ಕಣ್ತುಂಬಿಕೊಳ್ಳಿ… ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಸ್ಕೃತಿಕ ಸಿರಿ ಮತ್ತು ಧಾರ್ಮಿಕ ಐಸಿರಿಯ ಸಮ್ಮಿಲನದೊಂದಿಗೆ ವಿಜಯದಶಮಿ ಮೆರವಣಿಗೆ ಹೊರಟಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನ 3ನೇ ಬಾರಿಗೆ ಆನೆ ಅಭಿಮನ್ಯು ಹೊತ್ತಿದ್ದಾನೆ. ‘ಮೈಸೂರು ದಸರಾ ಜಂಬೂ ಸವಾರಿ 2022’ ಶೀರ್ಷಿಕೆಯಡಿ ಜಿಲ್ಲಾಡಳಿತವೇ ‘ಮೈಸೂರು ವಾರ್ತೆ’ ಯೂಟೂಬ್​ ಚಾನಲ್​ನಲ್ಲಿ ನೇರಪ್ರಸಾರ ಮಾಡುತ್ತಿದೆ.
Sign in to your account
Please enter an answer in digits:seventeen − 3 =
Remember me
