ಮೈಸೂರು:ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ವಿಶ್ವವಿಖ್ಯಾತ ಮೈಸೂರು ಅರಮನೆ ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆಯ ಸಮಾರಂಭ ಚರಿತ್ರಾರ್ಹ ಕ್ಷಣಗಳಿಗೆ ವೇದಿಕೆ ಆಯಿತು. ಮೋದಿ ನೇತೃತ್ವದಲ್ಲಿ 45 ನಿಮಿಷ ಕಾಲ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 15 ಸಾವಿರ ಜನ ಯೋಗ ಮಾಡಿ ಗಮನ ಸೆಳೆದರು.
ಮಂಗಳವಾರ ಬೆಳಗ್ಗೆ 7ರಿಂದ 7.45ರ ವರೆಗೆ ಒಟ್ಟು 19 ಆಸನಗಳು ಪ್ರದರ್ಶನಗೊಂಡವು. ಇದರಲ್ಲಿ ಮೊದಲ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನ ನಡೆಯಲಿವೆ. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ. ಒಂದು ನಿಮಿಷ ಶಾಂತಿಮಂತ್ರ, ಎರಡು ನಿಮಿಷ ಸಂಕಲ್ಪ… ಹೀಗೆ ಒಟ್ಟು 19 ಆಸನಗಳ ಪ್ರದರ್ಶನ ನಡೆಯಿತು.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ, ಮೈಸೂರು‌.@NarendraModi#YogaForHumanity#InternationalYogaDay#YogaDay2022https://t.co/VKWpKh6a2Q
— Basavaraj S Bommai (@BSBommai)June 21, 2022

ಮೈಸೂರಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ

ಯೋಗ ವ್ಯಕ್ತಿಗಾಗಿ ಮಾತ್ರವಲ್ಲ ಅದು ಮನುಕುಲದ ಒಳಿತಿಗಾಗಿ, ವಿಶ್ವಕ್ಕೆ ಶಾಂತಿ ನೀಡುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 9 =
Remember me
