ಮೈಸೂರು:ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಪ್ರೇಮಿಗಳು ಮದುವೆಯಾಗಿದ್ದು. ಖುದ್ದು ಪಿಡಿಒ ಅವರೇ ಪೌರೋಹಿತ್ಯ ವಹಿಸಿ ಗಲಾಟೆ ನಡುವೆಯೇ ಯುವ ಜೋಡಿಯನ್ನು ಒಂದುಗೂಡಿದ್ದಾರೆ.
ಇಂತಹ ಅಪರೂಪದ ಮದುವೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಅಂದಹಾಗೆ ಈ ಮದ್ವೆ ಗ್ರಾಪಂ ವಾರ್ಡ್​ ಸಭೆಯಲ್ಲೇ ವಾರ್ಡ್ ಸದಸ್ಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ನೆರವೇರಿತು.

ಹರದನಹಳ್ಳಿ ಗ್ರಾಮದ ಬಸವರಾಜು(24) ಮತ್ತು ಸುಚಿತ್ರಾ(19) ಇಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಪ್ರೇಮಿಗಳು ಒಬ್ಬರನ್ನೊಬ್ಬರು ಬಿಟ್ಟು ಬದುಕಲ್ಲ, ಮದುವೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಹೆತ್ತವರು ಎಷ್ಟೇ ಮನವೊಲಿಸಿದರೂ ಈ ಜೋಡಿ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ಎರಡೂ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು.

ಸೋಮವಾರ ಬೆಳಗ್ಗೆ ಗ್ರಾಪಂ ಸಭೆ ನಡೆಯುತ್ತಿತ್ತು. ಈ ವೇಳೆ ಬಸವರಾಜು ಮತ್ತು ಸುಚಿತ್ರಾ ಲವ್​ ವಿಚಾರವಾಗಿ ಗಲಾಟೆ ನಡೆದಿದ್ದು, ಮಧ್ಯ ಪ್ರವೇಶಿಸಿದ ಪಿಡಿಒ ಮಹದೇವಸ್ವಾಮಿ, ಎರಡು ಕುಟುಂಬಸ್ಥರಿಗೆ ತಿಳಿ ಹೇಳಿ ವಾರ್ಡ್ ಸಭೆಯಲ್ಲೇ ಇಬ್ಬರಿಗೂ ಮದುವೆ ಮಾಡಿಸಿಬಿಟ್ಟರು. ಪಿಡಿಒ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.(ದಿಗ್ವಿಜಯ ನ್ಯೂಸ್)
10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

ಸೊಸೆಯ ಸುತ್ತಿಗೆ ಏಟಿಗೆ ಅತ್ತೆ ಸಾವು! ಚಿತ್ರದುರ್ಗ ಜಿಲ್ಲೇಲಿ ರಾತ್ರೋರಾತ್ರಿ ಅಮಾನುಷ ಕೃತ್ಯ, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − 4 =
Remember me
