ಬೆಂಗಳೂರು:ಬೆಂಗಳೂರು ಎಂಬ ಮಹಾಸಮುದ್ರವು ಲಕ್ಷಾಂತರ ಜನರನ್ನು ಕರೆದು ಆಶ್ರಯ ನೀಡಿ ಅವರ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ಜಾಗ ನೀಡುತ್ತದೆ. ಹಾಗೆ ಬೆಂಗಳೂರಿಗೆ ಬಂದವರು, ತಮ್ಮದೇ ಆದ ಸ್ಥಾನ ಪಡೆಯಲು ಸಾಕಷ್ಟು ಶ್ರಮವಹಿಸುತ್ತಾರೆ. ಇಂಥದ್ದೊಂದು ಕಥೆಯನ್ನು ಆಧರಿಸಿ ಇತ್ತೀಚೆಗೆ ಯೂಟ್ಯೂಬ್​ನಲ್ಲಿ ‘ನಾರ’ ಎಂಬ ಕಿರುಚಿತ್ರ ಬಿಡುಗಡೆಯಾಗಿದೆ, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಕಿರುಚಿತ್ರವು ಹಳ್ಳಿಯಿಂದ ಬೆಂಗಳೂರಿಗೆ ಹಣ ಸಂಪಾದಿಸಲು ಬಂದು, ಮೂರು ಹೊತ್ತಿನ ಊಟಕ್ಕೆ ಪರದಾಡುವ ನಾರನೆಂಬ ಸಾಮಾನ್ಯ ಕಾರ್ವಿುಕನ ಜೀವನದ ಕಥೆ ಹೇಳುತ್ತದೆ.
ಪ್ರತಿದಿನ ಕಾರ್ವಿುಕರು ಅನುಭವಿಸುವ ಕಷ್ಟಗಳು, ಅವರ ಭಾವನೆಗಳು, ಅವರ ಮನಸ್ಥಿತಿ ಎಲ್ಲವನ್ನೂ 13 ನಿಮಿಷಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಆಸೆಗಳು ನೆರವೇರದಿದ್ದರೂ, ಮುಂದೊಂದು ದಿನ ಜೀವನದಲ್ಲಿ ಯಶಸ್ಸು ಪಡೆಯಲು ದಾರಿಯಂತೂ ಬೆಂಗಳೂರಿನಲ್ಲಿ ಸಿಗುತ್ತದೆ ಎಂಬ ಆಶಯ ಈ ಕಿರುಚಿತ್ರದ್ದಾಗಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ಮಹೇನ್ ಚೇತನ್, ‘ನಾರ’ ಎಂದರೆ ಉರ್ದುವಿನಲ್ಲಿ ರಣ ಘರ್ಜನೆ ಎಂಬರ್ಥವಿದೆ. ಜೀವನದಲ್ಲಿ ಮುಂದೆ ಬಂದವರಿಗೆ ತಮ್ಮ ಆರಂಭಿಕ ಜೀವನವನ್ನು ಮೆಲಕು ಹಾಕಲು ಮತ್ತು ತಾವು ಈ ಮೊದಲು ಆ ಜಾಗದಲ್ಲಿ ಇದ್ದೆವು ಎಂದು ನೆನಪಿಸುವ ಕೆಲಸವನ್ನು ಈ ಕಿರುಚಿತ್ರ ಮಾಡುತ್ತದೆ ಎನ್ನುತ್ತಾರೆ. ಕಥೆ ಬರೆದು ನಿರ್ದೇಶಿಸುವುದರ ಜತೆಗೆ ಮಹೇನ್ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ನಾನು ಬಿಗ್​ಬಾಸ್​ಗೆ ಹೋಗ್ತಿಲ್ಲ: ನಟ ಅನಿರುದ್ಧ್​

ಅಪ್ರಾಪ್ತನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ: ವೈದ್ಯೆ ವಿರುದ್ಧದ ಕೇಸ್​ ರದ್ದು ಮಾಡಲು ಹೈಕೋರ್ಟ್​ ನಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
