ಮೈಸೂರು:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಭಾಗಿಯಾದ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು. ಸ್ಪೆಷಲ್​ ಮೈಸೂರು​ ಪಾಕ್​, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು​ ಕೂಡ ಈ ಮೆನುವಿನಲ್ಲಿತ್ತು.
ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಅಂಬಾವಿಲಾಸ ಅರಮನೆಗೆ ತೆರಳಿದ ಮೋದಿ ಅವರು ರಾಜಮನೆತನದ ಆತಿಥ್ಯ ಸ್ವೀಕರಿಸಿದರು. ಪ್ರಧಾನಿಗಾಗಿ ಶುದ್ಧ ಸಸ್ಯಹಾರದ ಖಾದ್ಯಗಳನ್ನು ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ತಯಾರಿಸಲಾಗಿತ್ತು.

ರಾಜವಂಶಸ್ಥರ ಜತೆ ಪ್ರಧಾನಿ ಉಪಹಾರ ಸೇವಿಸುತ್ತಿದ್ದರೆ, ಇತ್ತ ಅರಮನೆ ಆವರಣದ ಹೊಗೆ ಸೇರಿದ್ದ ಸಾವಿರಾರು ಜನರು ಮೋದಿ.. ಮೋದಿ.. ಎಂದು ಜೈಕಾರ ಕೂಗುತ್ತಲೇ ಇದ್ದರು.
ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಮೈಸೂರಲ್ಲಿ ‘ನಮೋ’ ಯೋಗ: ನಿರಾಸೆಯಲ್ಲಿದ್ದ ಕೆಲ ಯೋಗಪಟುಗಳ ಮೊಗದಲ್ಲಿ ಸಂತಸ ಮೂಡಿಸಿದ ಡಿಸಿಪಿ

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ: ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು… ಬೆಂಗ್ಳೂರಿನ ಮಹಾ ಜನತೆಗೆ ಧನ್ಯವಾದಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 14 =
Remember me
