ಬೆಂಗಳೂರು:ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ಅಗ್ರಗಣ್ಯ ಫ್ರೆಂಚ್ ಕಂಪನಿ ಸಾಫ್ರಾನ್​ನ ನೂತನ ಕಚೇರಿ ಜೆ.ಪಿ.ನಗರದ ದೊರೆಸಾನಿಪಾಳ್ಯದಲ್ಲಿ ನಿರ್ಮಾಣಗೊಂಡಿದ್ದು, ಇದನ್ನು ಬೃಹತ್ ಕೈಗಾರಿಕಾ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ಷಣಾ ವಲಯದ ಮುಂಚೂಣಿ ಕಂಪನಿಗೆ ರಾಜ್ಯ ಸರ್ಕಾರವು ಆಧುನಿಕ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಗಳ ಬಲವನ್ನು ಒದಗಿಸಿದೆ ಎಂದರು.
ಸಾಫ್ರಾನ್ ಕಂಪನಿಯು ಎಚ್ಎಎಲ್ ಜತೆ ಸಹಭಾಗಿತ್ವ ಹೊಂದಿದ್ದು, ರಾಜ್ಯದಲ್ಲಿ ಎಂಜಿನ್ ವಿನ್ಯಾಸ ಚಟುವಟಿಕೆ ಮತ್ತು ತಯಾರಿಕೆಗೆ ಮುಂದಾಗಿದೆ. ಇದು ಭಾರತ ಮತ್ತು ಕರ್ನಾಟಕದ ಅತ್ಯುತ್ತಮ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಸ್ರೋ ಸಂಸ್ಥೆಯು ಇತ್ತೀಚೆಗೆ ಯಶಸ್ವಿಯಾಗಿ ಚಂದ್ರಯಾನವನ್ನು ಮುಗಿಸಿದೆ. ಇದು ದೇಶದ ಲಕ್ಷಾಂತರ ಯುವ ಎಂಜಿನಿಯರುಗಳಲ್ಲಿ ಮಹತ್ವಾಕಾಂಕ್ಷೆ ಹುಟ್ಟಿಸಿದೆ. ಸಾಫ್ರಾನ್ ಕಂಪನಿಯು ವೈಮಾಂತರಿಕ್ಷ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲು ಇದನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತದಲ್ಲಿನ ಫ್ರಾನ್ಸ್ ಕಾನ್ಸುಲ್ ಜನರಲ್ ಥಿಯರಿ ಬೆರ್ತಲೋಟ್, ಸಾಫ್ರಾನ್ ಕಂಪನಿ ಅಧ್ಯಕ್ಷೆ ಸಿಸಿಲ್ ಡುಬ್ರೊವಿನ್ (Cecil Dubrovin), ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಾಫ್ರಾನ್ ಎಂಜಿನಿಯರಿಂಗ್ ಸರ್ವೀಸ್ ಇಂಡಿಯಾ ಸಿಇಒ ಸಂದೀಪ ಕುಮಾರ ಶಿವಪುರಂ ಇದ್ದರು.
ಕೆಲ ಪಾಪಿಷ್ಠರ ಪೂಜೆಯಿಂದ ಕಟ್ಟೆ ಬರಿದಾಗಿದೆ, ಕಾವೇರಿಗೆ ರಾಜಕಾರಣಿಗಳು ಬಾಗಿನ ಅರ್ಪಿಸುವುದು ಬೇಡ: ರೈತ ಮುಖಂಡರ ಮನವಿ

ಹದಿನೇಳೇ ನಿಮಿಷಗಳಲ್ಲಿ ಮದುವೆ; ಇದರ ಉದ್ದೇಶವೇ ಉದಾತ್ತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
