ಬೆಂಗಳೂರು:ಹಲವಾರು ಸಾಧನೆಗಳನ್ನು ಮುಡಿಗೇರಿಸಿಕೊಂಡಿರುವ ವಿಜಯಾನಂದ ಟ್ರಾವೆಲ್ಸ್​ಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆಯಾಗಿದೆ. 500 ಕೋಟಿ ರೂ. ಮೊತ್ತದ, 550 ವೋಲ್ವೋ ಹಾಗೂ ಐಷರ್ ಇಂಟರ್​ಸಿಟಿ ಲಕ್ಸುರಿ ಸ್ಲೀಪರ್ ಬಸ್​ಗಳ ಖರೀದಿಗೆ ವಿಜಯಾನಂದ ಟ್ರಾವೆಲ್ಸ್ ಮುಂದಾಗಿದ್ದು, ಭಾರತದಲ್ಲಿ ಅಧಿಕ ಬಸ್​ಗಳನ್ನು ಖರೀದಿ ಮಾಡುತ್ತಿರುವ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದೆ.
ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್​ನ ಎಂಡಿ ಶಿವ ಸಂಕೇಶ್ವರ, ಖರೀದಿ ಆದೇಶ ನೀಡುವ ಮೂಲಕ ಭಾರತದಲ್ಲಿ ವೋಲ್ವೋ ಮತ್ತು ಐಷರ್​ಗಳಿಂದ 550 ಇಂಟರ್​ಸಿಟಿ ಬಸ್​ಗಳನ್ನು ವಿಜಯಾನಂದ ಟ್ರಾವೆಲ್ಸ್​ಗೆ ಸೇರ್ಪಡೆ ಮಾಡಿಕೊಂಡು ಮೈಲಿಗಲ್ಲು ನಿರ್ಮಾಣ ಮಾಡಿದ್ದಾರೆ. ಈ ವಹಿವಾಟು ಅಂದಾಜು 500 ಕೋಟಿ ರೂ. ಆಗಿದ್ದು, ಈ ಪೈಕಿ ಐಷರ್ ಇಂಟರ್​ಸಿಟಿ 13.5ಎಂ ಎಸಿ ಮತ್ತು ಎಸಿಯೇತರ ಸ್ಲೀಪರ್ ಕೋಚ್​ಗಳ 500 ಬಸ್ ಮತ್ತು ವೋಲ್ವೋ 9600 ಲಕ್ಸುರಿ ಸ್ಲೀಪರ್ ಕೋಚ್​ಗಳ 50 ಬಸ್​ಗಳು ಸೇರಿವೆ.
ಅತ್ಯುತ್ತಮ ದರ್ಜೆಯ ಬಸ್ ಖರೀದಿಗೆ ವೋಲ್ವೋ ಮತ್ತು ಐಷರ್​ನೊಂದಿಗೆ ವಿಜಯಾನಂದ ಟ್ರಾವೆಲ್ಸ್ ಉತ್ತಮ ಒಡನಾಟ ಹೊಂದಿದೆ. ಭಾರತದಲ್ಲಿ ಸುಖಕರ ಬಸ್ ಪ್ರಯಾಣದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಗುಣಮಟ್ಟ, ಸುರಕ್ಷತೆ ಹಾಗೂ ಪ್ರಯಾಣಿಕರ ಆರಾಮಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಈ ಬಸ್​ಗಳನ್ನು ಹೊಸಕೋಟೆ ಮತ್ತು ಪೀತಂಪುರದ ಅತ್ಯಾಧುನಿಕ ಕಾರ್ಖಾನೆಗಳಲ್ಲಿ ನಿರ್ವಿುಸಲಾಗಿದೆ. ವಿಜಯಾನಂದ
ಟ್ರಾವೆಲ್ಸ್​ನ ಈ ಕ್ರಮವು ಮುಂಬರುವ ದಿನಗಳಲ್ಲಿ ಅಖಿಲ ಭಾರತ (ಪಾನ್-ಇಂಡಿಯಾ) ಬ್ರಾ್ಯಂಡ್ ಆಗುವತ್ತ ದೃಢ ಹೆಜ್ಜೆಯನ್ನು ಇರಿಸಿದಂತಾಗಿದೆ. ವಿಜಯಾನಂದ ಟ್ರಾವೆಲ್ಸ್ ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಸೇವೆ ಒದಗಿಸುತ್ತಿದೆ.
ಹಲವು ಪ್ರಥಮಗಳ ಹೆಗ್ಗಳಿಕೆ: ಸಾರಿಗೆ ಉದ್ಯಮದಲ್ಲಿ ಬದಲಾವಣೆ ಹರಿಕಾರನೆಂದೇ ಖ್ಯಾತವಾಗಿರುವ ವಿಜಯಾನಂದ ಟ್ರಾವೆಲ್ಸ್ ಮಹಿಳೆಯರಿಗೆ ಆಸನ ಮೀಸಲು, ಬ್ಯಾಕ್​ಅಪ್ ಸೌಲಭ್ಯದೊಂದಿಗೆ ಬಸ್​ಗಳ ಇನ್-ಹೌಸ್ ರಿಪೇರಿ ಮತ್ತು ನಿರ್ವಹಣೆ, ಸುರಕ್ಷಿತ ಪ್ರಯಾಣಕ್ಕಾಗಿ ಇಬ್ಬರು ಚಾಲಕರು, ಎಲ್ಲ ಇಂಟರ್​ಸಿಟಿ ಬಸ್​ಗಳಿಗೆ ಕಂಪನಿ ವೆಬ್​ಸೈಟ್www.vrlbus.inಮತ್ತು ಆಪ್​ನಲ್ಲಿ ಅತಿ ಹೆಚ್ಚಿನ (ಶೇ.15) ರಿಯಾಯಿತಿ ಸಹಿತ ಪ್ರಯಾಣಿಕರಿಗೆ ಸೇವೆ ಒದಗಿಸಿ ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆ ಹೊಂದಿದೆ. ವಿಜಯಾನಂದ ಟ್ರಾವೆಲ್ಸ್ ಬಸ್​ಗಳು ನಿಗದಿತ ಸಮಯಕ್ಕೆ ಹೊರಡುವ ಹಾಗೂ ನಿಗದಿತ ಸಮಯಕ್ಕೆ ತಲುಪುವ ಮೂಲಕ ಸಮಯಪಾಲನೆಗೂ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜೋಧಪುರದಿಂದ ಬೆಂಗಳೂರಿಗೆ ಏಷ್ಯಾದ ಅತಿ ಉದ್ದದ ಬಸ್ ಮಾರ್ಗ ಪರಿಚಯಿಸಿದ ಖ್ಯಾತಿಯೂ ವಿಜಯಾನಂದ ಟ್ರಾವೆಲ್ಸ್​ನದ್ದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರು, ನಾವೀಗ ನಮ್ಮ ಬೆಳವಣಿಗೆಯ ನಿರ್ಣಾಯಕ ಕಾಲಘಟ್ಟದಲ್ಲಿದ್ದೇವೆಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ನಮ್ಮ ಪರಂಪರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಭೌಗೋಳಿಕ ತಲುಪುವಿಕೆ ಮತ್ತು ಇಂಟರ್​ಸಿಟಿ ಸಂಪರ್ಕ ವಿಚಾರಗಳಲ್ಲಿ ಪಾನ್-ಇಂಡಿಯಾ ಕಾರ್ಯಾಚರಣೆ ನಮ್ಮ ಬಯಕೆಯಾಗಿದೆ. ಬ್ರಾ್ಯಂಡ್ ಉಪಕ್ರಮಗಳು ಮತ್ತು ಹೊಸ ಹೂಡಿಕೆಗಳು ರಾಷ್ಟ್ರೀಯ ಮಟ್ಟದಲ್ಲಿ ನಮಗೆ ಹೊಸ ಚೈತನ್ಯ ತಂದಿದೆ. ವೋಲ್ವೋ ಮತ್ತು ವಿಇಸಿವಿ ಜತೆಗಿನ ನಮ್ಮ ಸಹಯೋಗದ ಬೆಳವಣಿಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಐಷರ್ ಇಂಟರ್​ಸಿಟಿ 13.5ಎಂ
2021ರಲ್ಲಿ ಪರಿಚಯಿಸಲಾದ ಐಷರ್ ಇಂಟರ್​ಸಿಟಿ 13.5ಎಂ ಬಸ್ ತೀಕ್ಷ್ಣವಾಗಿ ರೂಪಿಸಿದ ಟಾಲ್ ಬಾಯ್ ವಿನ್ಯಾಸ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾದ ಈ ಬಸ್​ಗಳು ಸುಖಕರ ಪ್ರಯಾಣ ಮತ್ತು ಸುರಕ್ಷತೆಯನ್ನು ಗರಿಷ್ಠಗೊಳಿಸುತ್ತದೆ. ಐಷರ್ 6016 ಎಸ್ ಎಲ್​ಪಿಒ 13.5 ಎಂ ಚಾಸಿಸ್ ಮೇಲೆ ಈ ಶ್ರೇಣಿಯನ್ನು ನಿರ್ವಿುಸಲಾಗಿದೆ ಮತ್ತು ವೋಲ್ವೋ ಗ್ರೂಪ್​ನ ಜಾಗತಿಕ ಪವರ್​ಟ್ರೇಯ್್ನ ಕುಟುಂಬದಿಂದ ಪಡೆದ ವಿಶ್ವಾಸಾರ್ಹ 5.1 ಲೀಟರ್ ವಿಇಡಿಎಕ್ಸ್5 ಇಂಜಿನ್​ನಿಂದ ಸನ್ನದ್ಧವಾಗಿದೆ. 240 ಎಚ್​ಪಿ ವರೆಗಿನ ಗರಿಷ್ಠ ಶಕ್ತಿ ಮತ್ತು 900 ಎನ್​ಎಂ: 1200-1600 ಆರ್​ಪಿಎಂ ಫ್ಲ್ಯಾಟ್ ಟೊರ್​ಕ್ಯೂ ಕೊಡುವ ಸಾಮರ್ಥ್ಯವಿದ್ದು, ಈ ಪವರ್​ಹೌಸ್ ಚಾಲಕರಿಗೆ ಅಸದಳವಾದ ಕಾರ್ಯಕ್ಷಮತೆ ಮತ್ತು ಆಪರೇಟರ್​ಗಳಿಗೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ.
ವೋಲ್ವೋ 9600 ಸ್ಲೀಪರ್ ಕೋಚ್
ವೋಲ್ವೋ 9600 ಸ್ಲೀಪರ್ ಕೋಚ್ ಪ್ರಶಸ್ತಿ ವಿಜೇತ ಯುರೋಪಿಯನ್ ವಿನ್ಯಾಸದಿಂದ ಕೂಡಿದೆ ಮತ್ತು ದೇಶಾದ್ಯಂತ ಪ್ರಮುಖ ಮಾರ್ಗಗಳಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಐಷಾರಾಮಿ ಮತ್ತು ಆರಾಮದಾಯಕತೆಯಲ್ಲಿ ಈಗಾಗಲೆ ಬೆಂಚ್​ವಾರ್ಕ್ ಸ್ಥಾಪಿಸಿದೆ. ವಿಶಿಷ್ಟ ಟಾಲ್​ಬಾಯ್ ವಿನ್ಯಾಸವು ಉತ್ತಮ ಸೌಂದರ್ಯದಿಂದ ಕೂಡಿದ್ದು, 40 ಸ್ಲೀಪರ್ ಬರ್ತ್​ಗಳಿಗೆ ವಿಶಾಲ ಸ್ಥಳಾವಕಾಶ ಹೊಂದಿದೆ. 8.5 ಸಿಯು.ಎಂ ಲಗೇಜ್ ಸ್ಥಳವನ್ನೂ ಒಳಗೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 20 =
Remember me
