ಬೆಂಗಳೂರು:ನೂರಾರು ಕನಸಿನ ಬುತ್ತಿಯೊಂದಿಗೆ ನಾಲ್ಕು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡ ಘಟನೆ ಬಾಗಲಗುಂಟೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಬಾಗಲಗುಂಟೆಯ ನಿವಾಸಿ ಶ್ವೇತಾ (28) ಮೃತ ದುರ್ದೈವಿ. ಖಾಸಗಿ ಕಂಪನಿ ಉದ್ಯೋಗಿ ಕೃಷ್ಣಮೂರ್ತಿ ಜತೆ 4 ತಿಂಗಳ ಹಿಂದೆ ಶ್ವೇತಾಳ ಮದುವೆ ಆಗಿತ್ತು. ದಂಪತಿ ಬಾಗಲಗುಂಟೆಯಲ್ಲಿ ವಾಸವಿದ್ದರು.
ಭಾನುವಾರ ಮನೆಯಲ್ಲಿ ರೂಮಿನ ಬಾಗಿಲನ್ನು ಹಾಕಿಕೊಂಡ ಶ್ವೇತಾ ನೇಣಿಗೆ ಕೊರಳೊಡ್ಡಿದ್ದಳು. ಇದನ್ನ ಗಮನಿಸಿದ ಪತಿ ಮತ್ತು ಆತನ ಕುಟುಂಬಸ್ಥರು ಶ್ವೇತಾಳನ್ನು ಕೆಳಗಿಳಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆ ಬದುಕಿರಲಿಲ್ಲ.
ಸಾವಿಗೂ ಮುನ್ನಾ ತಾಯಿಗೆ ಕರೆ ಮಾಡಿದ್ದ ಶ್ವೇತಾ, ಮದುವೆಯಾದಾಗಿಂದ ಒಂದಲ್ಲ ಒಂದು ವಿಚಾರಕ್ಕೆ ಗಂಡ ಗಲಾಟೆ ಮಾಡುತ್ತಾನೆ. ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದಾನೆ ಎಂದು ಹೇಳಿದ್ದಳಂತೆ. ಗಂಡನ ಹಿಂಸೆ ತಾಳಲಾರದೆ ಶ್ವೇತಾ, ತಾಯಿಗೆ ಈ ಹಿಂದೆ ಹಲವು ಬಾರಿ ಕರೆ ಮಾಡಿ ಅಳಲು ತೋಡಿಕೊಂಡಿದ್ದಳಂತೆ.
ಶ್ವೇತಾಳ ವಿವಾಹ ಸಮಯದಲ್ಲಿ ಕೇಳಿದಷ್ಟು ವರದಕ್ಷಿಣೆ ಕೊಡಲಾಗಿತ್ತು. ವಿವಾಹವಾದ ಬಳಿಕವೂ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಕೃಷ್ಣಮೂರ್ತಿ ಕಿರುಕುಳ ಕೊಡುತ್ತಿದ್ದನಂತೆ. ಇದೇ ವಿಚಾರಕ್ಕೆ ಬೇಸತ್ತ ಶ್ವೇತಾ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಗೋಧಿ ಹಿಟ್ಟಿನ ಉದ್ಯಮಕ್ಕೂ ಕಾಲಿಟ್ಟ Parle-G

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − two =
Remember me
