ಮೈಸೂರು:ನಂಜನಗೂಡು ತಾಲೂಕು ರಾಂಪುರ ಗ್ರಾಮದ ಯುವತಿಯೊಬ್ಬಳು ಮದ್ವೆಯಾದ ಮೂರೇ ತಿಂಗಳಿಗೆ ದುರಂತ ಅಂತ್ಯಕಂಡಿದ್ದಾಳೆ. ಆಷಾಢ ಮಾಸದ ಹಿನ್ನೆಲೆ ತವರಿಗೆ ಬಂದಾಕೆ, ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಅವರಿಬ್ಬರನ್ನೂ ಬಲವಂತವಾಗಿ ವಾಪಸ್​ ಕರೆತರಲಾಗಿತ್ತಾದರೂ ಆಕೆ ಬಾರದ ಲೋಕಕ್ಕೆ ಹೋಗಿದ್ದಾಳೆ…
ವರ್ಷಿತಾ(20) ಮೃತ ದುರ್ದೈವಿ. ವರ್ಷಿತಾ ಮತ್ತು ಪಕ್ಕದ ಮನೆಯ ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ನಿರಾಕರಿಸಿ ವರ್ಷಿತಾಳ ಕುಟುಂಬಸ್ಥರು, ಚಾಮರಾಜ‌ನಗರ ಮೂಲದ ಯುವಕನ‌ ಜತೆ ಮದುವೆ ಮೇ 8ರಂದು ಅದ್ದೂರಿಯಾಗಿ ಮದುವೆ ಮಾಡಿದ್ದರು. ಒಲ್ಲದ ಮನಸ್ಸಿನಿಂದಲೇ ಮದುವೆಯಾಗಿದ್ದ ವರ್ಷಿತಾ, ಆಷಾಢ ಮಾಸದ ಹಿನ್ನೆಲೆ ಕಳೆದ ತಿಂಗಳು ತವರು ಮನೆಗೆ ಬಂದಿದ್ದಾಗ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಿಯಕರನ ಜತೆ ಬೆಂಗಳೂರಿನಲ್ಲಿ ವರ್ಷಿತಾ ಪತ್ತೆಯಾಗಿದ್ದಳು. ಪೊಲೀಸರು ಇಬ್ಬರನ್ನೂ ಕರೆತಂದು ಬುದ್ಧಿ ಮಾತು ಹೇಳಿ, ರಾಂಪುರ ಗ್ರಾಮದ ತಾತನ ಮನೆಗೆ ವರ್ಷಿತಾಳನ್ನು ಕಳುಹಿಸಿದ್ದರು. ಪ್ರಿಯಕರನಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವತಿ, ತಾತನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಗ್​ ಬಾಸ್​ ಮನೆಯಲ್ಲಿ ಮತ್ತೊಂದು ಗುಟ್ಟು ಬಿಚ್ಚಿಡುತ್ತಲೇ ಹೆಣ್ಮಕ್ಕಳಿಗೆ ಸಂದೇಶ ರವಾನಿಸಿದ ಸೋನು!

ಚಾಮರಾಜನಗರ ಉಪನ್ಯಾಸಕಿ ದುರಂತ ಅಂತ್ಯ: ಗೊಂದಲದ ಗೂಡಿಗೆ ಸಿಲುಕಿದ ಚಂದನಾ… ಡೆತ್​ನೋಟಲ್ಲಿದೆ ಸಾವಿನ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
