ಹುಬ್ಬಳ್ಳಿ:ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದ್ವೆಯಾಗಿತ್ತು. ಮನೆಯವರ ವಿರೋಧದ ನಡುವೆಯೂ ಯುವತಿ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಅತ್ತ ಮಗ-ಸೊಸೆಯನ್ನು ಮನೆ ತುಂಬಿಸಿಕೊಂಡ ಯುವಕನ ಪಾಲಕರು ನಾಳೆ(ಜೂ.26) ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರಲ್ಲಿ ಯುವತಿಯನ್ನೇ ಕಿಡ್ನ್ಯಾಪ್​ ಮಾಡಲಾಗಿದೆ! ಗಂಡನೊಂದಿಗೆ ತನ್ನ ಅಪ್ಪ-ಅಮ್ಮನ ಆಶೀರ್ವಾದ ಪಡೆಯಲೆಂದು ಹೋದ ಯುವತಿಯನ್ನ ಹುಬ್ಬಳ್ಳಿಯ ಕಾರ್ಪೋರೇಟರ್ ಸೇರಿ ಮೂವರು ಅಪಹರಿಸಿದ್ದಾರೆ ಎಂದ ಯುವಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.
ಶುಕ್ರವಾರ ರಾತ್ರಿ ಯುವಕ ಕೊಟ್ಟ ದೂರಿನ ಮೇರೆಗೆ ಕಾರ್ಪೋರೆಟರ್ ಚೇತನ ಹಿರೇಕೆರೂರ, ಯುವತಿಯ ತಂದೆ ಶಿವು ಹಿರೇಕೆರೂರ ಸೇರಿ ಮೂವರ ವಿರುದ್ಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವು ಹಿರೇಕೆರೂರ ಅವರ ಪುತ್ರಿ ಸಹನಾ ಮತ್ತು ನಿಖಿಲ್ ದಾಂಡೇಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಸಹನಾಳ ಕುಟುಂಬಸ್ಥರಿಂದ ವಿರೋಧ ಇತ್ತಂತೆ. ಹಾಗಾಗಿ ಮನೆಯವರ ವಿರೋಧದ ನಡುವೆಯೂ ಸಹನಾ ನಾಲ್ಕೈದು ತಿಂಗಳ ಹಿಂದೆಯೇ ಪ್ರಿಯಕರ ನಿಖಿಲ್​ ಜತೆ ಮದ್ವೆಯಾಗಿದ್ದಳು.
ಇವರಿಬ್ಬರ ಮದ್ವೆಯನ್ನು ಒಪ್ಪಿಕೊಂಡ ಯುವಕನ ಕುಟುಂಬಸ್ಥರು ನವದಂಪತಿಗಾಗಿ ಭಾನುವಾರ ಆರತಕ್ಷತೆ ಕಾರ್ಯಕ್ರಮ ನಡೆಸಲು ಸಿದ್ಧತೆಯಲ್ಲಿದ್ದರು. ಅತ್ತ ಪೋಷಕರನ್ನು ಭೇಟಿಯಾಗಿ ಆರ್ಶೀವಾದ ಪಡೆಯಲು ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿಗೆ ಸಹನಾ ಹೋಗಿದ್ದಳು. ಈ ವೇಳೆ ಯುವತಿಯನ್ನು ಸೋದರ ಸಂಬಂಧಿಯಾದ ಕಾರ್ಪೋರೆಟರ್ ಚೇತನ ಹಿರೇಕೆರೂರ, ಆಕೆಯ ತಂದೆ ಕಿಡ್ನ್ಯಾಪ್​ ಮಾಡಿದ್ದಾರೆ ಎಂದು ಸಹನಳಾ ಗಂಡ ದೂರು ನೀಡಿದ್ದಾನೆ.
ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಸಿದ್ದುಗೆ ಸಿಕ್ತು ಸೇಫ್​ ಝೋನ್​… ಪದೇಪದೆ ಯತೀಂದ್ರ ಭೇಟಿ, ಸಿದ್ದುಗಾಗಿ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದ ಶಾಸಕ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
