ಬೆಳಗಾವಿ:ನೂರಾರು ಕನಸಿನೊಂದಿಗೆ ಮೂರು ತಿಂಗಳ ಹಿಂದೆ ಪ್ರಿಯಕರನೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ 19 ವರ್ಷದ ಯುವತಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.
ಬೆಳಗಾವಿ ಶಹಾಪುರದ ಅಲ್ವಾನ್‍ಗಲ್ಲಿ ನಿವಾಸಿ ಜ್ಯೋತಿ(19) ಮೃತ ದುರ್ದೈವಿ. 23 ವಷ್ದ ಲಕ್ಷ್ಮೀಕಾಂತ್ ಯಲ್ಲಾರಿ ಮತ್ತು ಜ್ಯೋತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜಾತಿ ಬೇರೆಬೇರೆಯಾಗಿದ್ದರೂ, ಮೂರು ತಿಂಗಳ ಹಿಂದೆ ರಿಜಿಸ್ಟ್ರಾರ್​ ಮದುವೆಯನ್ನೂ ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು. ಇಂದು (ಶನಿವಾರ) ಬೆಳಗ್ಗೆ ಗಂಡನ ಮನೆಯಲ್ಲೇ ಜ್ಯೋತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಗಂಡ ಪರಾರಿಯಾಗಿದ್ದಾನೆ.
ಮಗಳಿಗೆ ಮದುವೆ ಆದ ದಿನದಿಂದಲೂ ನಿತ್ಯ ಜಾತಿ ನಿಂದನೆ ಮಾಡುತ್ತಿದ್ದರು, ಅಲ್ಲದೆ, ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಅಳಿಯ ಲಕ್ಷ್ಮೀಕಾಂತ್ ಮತ್ತು ಅವರ ಮನೆಯವರು ಸೇರಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತಳ ಕುಟುಂಬಸ್ಥರ ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜ್ಯೋತಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆ ಬಳಿಕ ನವವಿವಾಹಿತೆ ಸಾವಿಗೆ ಜಾತಿ ಅಡ್ಡಿಯಾಯ್ತೆ? ಪ್ರಿಯಕರನೇ ತನ್ನ ಪ್ರೇಯಸಿಯನ್ನ ಕೊಲೆ ಮಾಡಿದನೇ ಎಂಬುದಕ್ಕೆ ಉತ್ತರ ಸಿಗಲಿದೆ.
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಊರಿಗೆ ತಂಗಿಯ ಶವ ತರುತ್ತಿದ್ದ ಅಣ್ಣನ ಪ್ರಾಣವನ್ನೂ ಮಾರ್ಗಮಧ್ಯೆ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
