ಬೆಂಗಳೂರು:ಐಸಿಸ್ ಉಗ್ರ ಸಂಘಟನೆ ಜತೆ ನಂಟಿನ ಪ್ರಕರಣ ಸಂಬಂಧ ಕರ್ನಾಟಕ ಸೇರಿ ದೇಶದ 6 ರಾಜ್ಯಗಳಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವರನ್ನ ವಶಕ್ಕೆ ಪಡೆದಿದ್ದಾರೆ. ತುಮಕೂರಲ್ಲಿ ಓರ್ವ ವಿದ್ಯಾರ್ಥಿ, ಭಟ್ಕಳದಲ್ಲಿ ಸೋಹೋದರರಿಬ್ಬರನ್ನ ವಶಕ್ಕೆ ಪಡೆದು ಕರೆದೊಯ್ದಿರುವ ಎನ್​ಐಎ ತಂಡ, ವಿಚಾರಣೆ ಮುಂದುವರಿಸಿದೆ.
6 ರಾಜ್ಯಗಳಲ್ಲಿ ಒಟ್ಟು 13 ಕಡೆ ದಾಳಿ ನಡೆಸಿ ಎನ್​ಐಎ ಶೋಧಕಾರ್ಯ ನಡೆಸಿದೆ. ಕರ್ನಾಟಕದ ತುಮಕೂರು ಮತ್ತು ಭಟ್ಕಳದಲ್ಲಿ, ಮಧ್ಯಪ್ರದೇಶದ ಭೂಪಾಲ್ ಮತ್ತು ರಾಯ್ ಸೇನ್​ನಲ್ಲಿ, ಗುಜರಾತ್​ನ ಬರೂಚ್, ಸೂರತ್, ನವಸಾರಿ, ಅಹ್ಮದಾಬಾದ್​ನಲ್ಲಿ, ಬಿಹಾರದ ಅರಾರಿಯದಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ನಾಂದೇಡ್​ನಲ್ಲಿ, ಉತ್ತರ ಪ್ರದೇಶದ ದಿಯೋಬಂಡ್​ನಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ. ಎನ್​ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ತುಮಕೂರಿನ ಎಚ್​ಎಂಎಸ್​ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್​ ವಿದ್ಯಾರ್ಥಿ ಸಾಜೀದ್​ ಎಂಬಾತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ತುಮಕೂರಿನ ಸದಾಶಿವನಗರದ 7ನೇ ಮುಖ್ಯರಸ್ತೆಯಲ್ಲಿ 8 ತಿಂಗಳ‌ ಹಿಂದಷ್ಟೇ ಮನೆ ಬಾಡಿಗೆ ಪಡೆದು ವಾಸವಿದ್ದ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮನೆಯೊಂದರ ಮೇಲೂ ದಾಳಿ ಮಾಡಿರುವ ಎನ್​ಐಎ ಅಧಿಕಾರಿಗಳು ಅಬ್ದುಲ್ ಮುಖ್ತದರ್(30) ಎಂಬಾತನ ವಶಕ್ಕೆ ಪಡೆದಿದ್ದಾರೆ. ಈತನ ಸಹೋದರನನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ.
ಐಸಿಸ್​ ಉಗ್ರರ ಜತೆ ನಂಟು: ಮನೆ-ಕಾಲೇಜು ಮೇಲೆ NIA ದಾಳಿ, ಭಟ್ಕಳದಲ್ಲಿ ಇಬ್ಬರು- ತುಮಕೂರಲ್ಲಿ ಒಬ್ಬನ ವಶ

ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 11 =
Remember me
