ನಿಡಗುಂದಿ(ವಿಜಯಪುರ):ತಾಲೂಕಿನ ಹೆಬ್ಬಾಳದ ಚಾಲಕ ಹೊಳೆಬಸಪ್ಪ ಸಾತಪ್ಪ ಮನಹಳ್ಳಿ 61 ಗಂಟೆ ನಿರಂತರ ಟ್ರ್ಯಾಕ್ಟರ್​ ಮೂಲಕ ನೇಗಿಲು ಹೊಡೆದು ಗಮನ ಸೆಳೆದಿದ್ದಾರೆ.
ಗ್ರಾಮದ ಚನ್ನನಗೌಡ ಪಾಟೀಲರ 28 ಎಕರೆ ಜಮೀನು, ಈರಪ್ಪ ಹೊರ್ತಿ ಅವರ 5 ಎಕರೆ ಜಮೀನು ಹಾಗೂ ಸೋಮಪ್ಪ ಹಚಡದ ಅವರ 3 ಎಕರೆ ಸೇರಿ ಒಟ್ಟು 36 ಎಕರೆ ಜಮೀನನ್ನು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 7.30ರವರೆಗೆ ನಿರಂತರ ನೇಗಿಲು ಹೊಡೆದಿದ್ದಾರೆ. ಎಳನೀರು, ಅಲ್ಪೋಪಾಹಾರ ಸೇವನೆ ಮತ್ತು ಮಲಮೂತ್ರ ವಿಸರ್ಜನೆಗೆಂದು ಎರಡ್ಮೂರು ಬಾರಿ ಕೆಲ ನಿಮಿಷ ಟ್ರ್ಯಾಕ್ಟರ್​​ ನಿಲ್ಲಿಸಿದ್ದನ್ನು ಹೊರತುಪಡಿಸಿ ನಿರಂತರ ಟ್ರ್ಯಾಕ್ಟರ್​ ಚಲಾಯಿಸಿ ಸಾಹಸ ಪ್ರದಶಿರ್ಸಿದ್ದಾರೆ.
10 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿಯ ಕಡಗ:ಹೊಳೆಬಸಪ್ಪನ ವಿಶಿಷ್ಟ ಸಾಧನೆ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಅವರನ್ನು ಅಭಿನಂದಿಸಿದರು. ಹಲಗೆ ಬಾರಿಸುತ್ತ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. 10 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿ ಕಡಗ, ಬಟ್ಟೆ ನೀಡಿ ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಸಂಭ್ರಮಿಸಿದರು.
ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!

ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
