ಬೆಳಗಾವಿ:ಪಾಸ್ ಇಲ್ಲದೆ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ ವಿಧಾನ ಪರಿಷತ್​ನ ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರ ಪಿಎ ಅವರನ್ನು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್​ ಪಾಟೀಲ್​ ಹೊರ ಹಾಕಿದ ಪ್ರಸಂಗ ಬುಧವಾರ ಬೆಳಗ್ಗೆ ನಡೆಯಿತು.
ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಜೂ.13ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ಇಂದು ನಡೆಯುತ್ತಿದೆ. ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ಮೆಂಟ್​ ಕಾಲೇಜಿನಲ್ಲಿ ನಡೆಯುತ್ತಿದೆ.

ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದ್ದು, ಪಾಸ್​ ಇಲ್ಲದೆ ಯಾರನ್ನೂ ಒಳಗೆ ಬಿಡುತ್ತಿಲ್ಲ. ಆದರೆ. ಹಣಮಂತ ನಿರಾಣಿ ಅವರ ಪಿಎ ಪಾಸ್​ ಇಲ್ಲದಿದ್ದರೂ ಮತ ಏಣಿಕೆ ಕೇಂದ್ರಕ್ಕೆ ಆಗಮಿಸಿ ಚುನಾವಣಾಧಿಕಾರಿಯ ಕೆಂಗಣ್ಣಿಗೆ ಗುರಿಯಾದರು. ಐಡಿ ಕಾರ್ಡ್ ಇಲ್ಲದೆ ಹೇಗೆ ಬಂದಿದ್ದೀರಿ? ಎಂದು ಏರುಧ್ವನಿಯಲ್ಲೇ ಪ್ರಶ್ನಿಸಿದ ಚುನಾವಣಾಧಿಕಾರಿ, ಕೈ ತೋರಿಸಿ ಸಮಜಾಯಿಷಿ ಕೊಡಲು ಬಂದ ಹಣಮಂತ ನಿರಾಣಿಯ ಪಿಎ ಅವರ ಕೈ ಎಳೆದು ಹೊರಗೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿದರು.
ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ, ಮತಪೆಟ್ಟಿಗೆ ಬದಲಾವಣೆ?

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

Sign in to your account
Please enter an answer in digits:12 − 8 =
Remember me
