ಬೆಳಗಾವಿ:ವಿಧಾನ ಪರಿಷತ್​ನ ವಾಯುವ್ಯ ಶಿಕ್ಷಕರ ‌ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಮತ ಎಣಿಕೆಯಲ್ಲೂ ಗೊಂದಲ ಸೃಷ್ಟಿಯಾಗಿದೆ. ಮತ ಕ್ಷೇತ್ರದ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಾಗಿ ಕಂಡುಬಂದಿದ್ದು, 71 ಮತಗಳು ಇರಬೇಕಿದ್ದ ಪೆಟ್ಟಿಗೆಯಲ್ಲಿ 76 ಮತಗಳು ಹೇಗೆ ಬಂತು? ಎಂದು ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಆಕ್ಷೇಪಿಸಿದ್ದಾರೆ.
ಬಾಗಲಕೋಟೆಯ ಇಳಕಲ್ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಿಗೆ ಬಂದಿವೆ. ಬಿಜೆಪಿ ಅಭ್ಯರ್ಥಿ ಅರುಣ ಶಾಹಾಪುರ ಪರ 5 ಮತಗಳು ಹೆಚ್ಚಿಗೆ ಬಂದಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಎನ್.ಬಿ.ಬನ್ನೂರ, ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, ಮತಗಟ್ಟೆ ಸಂಖ್ಯೆ 3ರ ವಾಯುವ್ಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಮೂರು ಪದವೀಧರ ಮತಗಳು ಕಂಡು ಬಂದಿವೆ.
ಮತ ಎಣಿಕೆ ಆರಂಭಕ್ಕೂ ಮುನ್ನವೇ ಕೇಂದ್ರದಲ್ಲಿ ಬೆಳಗ್ಗೆ ಕೆಲಕಾಲ ಗೊಂದಲ ಉಂಟಾಗಿತ್ತು. ಮತಗಟ್ಟೆ ನಂಬರ್​ 4ರ ಮತಪೆಟ್ಟಿಗೆಯ ಮೇಲೆ ಕಟ್ಟಿದ ಬಟ್ಟೆ ಬದಲಾವಣೆಯಾಗಿತ್ತು. ಪೆಟ್ಟಿಗೆ ಮೇಲೆ ಸೀಲ್ ಹಾಕದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಲೋನಿ ಪರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ಜೋರಾಗಿ ಗದ್ದಲ ಶರುವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಸದಲಗಾ- ಚಿಕ್ಕೋಡಿ ಭಾಗದ ಎರಡು ಮತಪೆಟ್ಟಿಗೆ ಮೇಲೆ ಈ ರೀತಿ ಆಗಿದೆ. ಮತದಾನ ಮುಗಿದ ಬಳಿಕ ಇದೇ ಬಟ್ಟೆಯನ್ನೇ ಸುತ್ತಲಾಗಿತ್ತು. ಇದರಲ್ಲಿ ಅನುಮಾನ ಬೇಡ ಎಂದು ಮನವೊಲಿಸಿದರು.
ರಾಜಕೀಯ ಇತಿಹಾಸ ನಿರ್ಮಿಸಿದ ಹೊರಟ್ಟಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8ನೇ ಬಾರಿಗೆ ಗೆದ್ದು ಬೀಗಿದ ಬಸವರಾಜ ಹೊರಟ್ಟಿ

ಗೊರವನಹಳ್ಳಿ ಸಮೀಪ ಘೋರ ಕೃತ್ಯ: 3 ವರ್ಷದ ಬಳಿಕ ಸಿಕ್ಕಿಬಿದ್ದವ ಬಾಯ್ಬಿಟ್ಟ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
