ಬೆಂಗಳೂರು:ಸೇಂಟ್​ ಫಿಲೋಮಿನಾ ಆಸ್ಪತ್ರೆಯಲ್ಲಿ ವೈದ್ಯೆ ಸೋಗಿನಲ್ಲಿ ಬಂದು ಮಹಿಳಾ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡಿದ್ದ ನರ್ಸ್​ ಅಶೋಕನಗರ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಆದರೆ ವಿಚಾರಣೆ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಆಕೆ ಕಟ್ಟಿದ ಅಷ್ಟಿಷ್ಟಲ್ಲ.
ಕೋರಮಂಗಲ ನಿವಾಸಿ ಎನ್​.ಲಕ್ಷ್ಮೀ ಬಂಧಿತೆ. ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದು, ಪಾಲಕರ ಜತೆ ನೆಲೆಸಿದ್ದಾಳೆ. ಜ.14ರ ಮಧ್ಯಾಹ್ನ ವೈದ್ಯೆ ಸೋಗಿನಲ್ಲಿ ಸೇಂಟ್​ ಫಿಲೋಮಿನಾ ಆಸ್ಪತ್ರೆಗೆ ಬಂದ ನರ್ಸ್​, ಇಬ್ಬರು ಮಹಿಳಾ ರೋಗಿಗಳ ಮೈಮೇಲಿದ್ದ ಚಿನ್ನ ಎಗರಿಸಿ ಪರಾರಿಯಾಗಿದ್ದಳು. ಈ ಬಗ್ಗೆ ಚಿನ್ನ ಕಳೆದುಕೊಂಡ ಮಹಿಳಾ ರೋಗಿಯ ಪುತ್ರ, ಟಿ.ಸಿ.ಪಾಳ್ಯದ ನಿವಾಸಿ ಜೆ. ರಮೇಶ್‌ಕುಮಾರ್ ಅಶೋಕನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆಕೆಯನ್ನ ಬಂಧಿಸಿದ್ದಾರೆ.
ಬ್ಲ್ಯಾಕ್​ಮೇಲ್​ ನಾಟಕ:ಪೊಲೀಸರಿಗೆ ಸೆರೆಸಿಕ್ಕ ಲಕ್ಷ್ಮೀ, ತನಿಖೆಯ ದಿಕ್ಕು ತಪ್ಪಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ನಾಟಕವಾಡಿದ್ದಳು. ‘ನನ್ನ ಖಾಸಗಿ ವಿಡಿಯೋವನ್ನು ನನ್ನ ಸ್ನೇಹಿತ ಸೆರೆಹಿಡಿದುಕೊಂಡು ಹಣಕ್ಕಾಗಿ ಬ್ಲ್ಯಾಕ್​​ಮೇಲ್​ ಮಾಡುತ್ತಿದ್ದಾನೆ. ಎಷ್ಟೇ ಹಣ ಕೊಟ್ಟರೂ ಆತ ಪದೇಪದೆ ಹಣಕ್ಕೆ ಬೇಡಿಕೆ ಒಡ್ಡುತ್ತಿದ್ದಾನೆ. ಹಣ ಕೊಡದೆ ಇದ್ದರೆ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾನೆ’ ಎಂದು ಸುಳ್ಳು ಹೇಳಿದ್ದಳು. ಕೊನೆಗೆ ಪೊಲೀಸರು, ಆತ ಯಾರು? ಹೆಸರು ಏನು? ಮೊಬೈಲ್​ ಮತ್ತು ಕದ್ದ ಚಿನ್ನವನ್ನ ಎಲ್ಲಿ ಅಡವಿಟ್ಟು ಹಣ ಕೊಟ್ಟಿರುವೆ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಸೂಕ್ತ ಉತ್ತರ ಕೊಟ್ಟಿರಲಿಲ್ಲ. ಕೊನೆಗೆ ತಪ್ಪೊಪ್ಪಿಕೊಂಡ ಲಕ್ಷ್ಮೀ, ತರಕಾರಿ ವ್ಯಾಪಾರಿಗೆ ಕದ್ದ ಚಿನ್ನ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾಳೆ.
ಆರ್ಥಿಕ ಸಂಕಷ್ಟದಿಂದ ಲಕ್ಷ್ಮೀ, ತನ್ನ ಮನೆ ಸಮೀಪದ ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದರು. ವಾಪಸ್​ ಕೊಡಲು ಸಾಧ್ಯವಾಗಿರಲಿಲ್ಲ. ಸಾಲ ವಾಪಸ್​ ಕೊಡುವಂತೆ ಮಹಿಳೆ ಒತ್ತಾಯ ಮಾಡುತ್ತಿದ್ದಳು. ಕೊನೆಗೆ ಕಳ್ಳತನ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದಳು.
ಅಶೋಕನಗರದ ಸೇಂಟ್​ ಫಿಲೋಮಿನಾ ಆಸ್ಪತ್ರೆ ಚಿರಪರಿಚಿತವಾಗಿತ್ತು. ಪ್ರವೇಶ ದ್ವಾರ ಮತ್ತು ಹೊರಗೆ ಬರುವ ಎಲ್ಲ ಮಾರ್ಗಗಳನ್ನು ಲಕ್ಷ್ಮಮ್ಮ ತಿಳಿದುಕೊಂಡಿದ್ದಳು. ಜ.14ರ ಮಧ್ಯಾಹ್ನ 2.45ರಲ್ಲಿ ಬಿಳಿ ಕೋಟ್​ ಧರಿಸಿ ಹೋಗಿ ಮಹಿಳಾ ರೋಗಿಗಳನ್ನು ತಪಾಸಣೆ ಮಾಡಬೇಕೆಂದು ಅವರ ಕಡೆಯವರನ್ನು ಹೊರಗೆ ಕಳುಹಿಸಿ ರೋಗಿ ಮೈಮೇಲಿನ ಎಲ್ಲ ಚಿನ್ನಾಭರಣ ತೆಗೆಸಿ ಅವರಿಗೆ ಗೊತ್ತಾಗದಂತೆ ಕಳವು ಮಾಡಿದ್ದಳು. ಬದಲಿಗೆ ನಕಲಿ ಚಿನ್ನದ ಸರವಿಟ್ಟು ಬಂದಿದ್ದಳು. ಇದೇ ರೀತಿ ಇಬ್ಬರು ಮಹಿಳಾ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದಳು.
ಕದ್ದ ಚಿನ್ನವನ್ನು ಸಾಲ ಕೊಟ್ಟಿದ್ದ ಮಹಿಳೆಗೆ ಕೊಟ್ಟ ಲಕ್ಷ್ಮೀ, ಇದು ನನ್ನ ಚಿನ್ನಾಭರಣ. ಕೆಲಸಕ್ಕೆ ಟೈಮ್​ ಆಗಿದೆ. ಈ ಚಿನ್ನವನ್ನು ಅಡವಿಟ್ಟು ನಿನ್ನ ಸಾಲಕ್ಕೆ ವಜಾ ಮಾಡಿಕೋ ಎಂದು ಹೇಳಿ ಹೋಗಿದ್ದಳು.
ಇತ್ತ ಆಸ್ಪತ್ರೆಯಲ್ಲಿ ರೋಗಿ ಕಡೆಯವರು ಅಶೋಕನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಂತಾಮಣಿಯಲ್ಲಿ ಖೋಟಾ ನೋಟು ಜಾಲ ಪತ್ತೆ: 1.29 ಕೋಟಿ ಮೌಲ್ಯದ ನಕಲಿ ನೋಟು ಜಪ್ತಿ, ಮೂವರ ಬಂಧನ

ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…

ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗಳ ಚಿನ್ನ ಕದ್ದ ನಕಲಿ ಡಾಕ್ಟರ್! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
