ಬೆಂಗಳೂರು:ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬಳಿಕ ಕೆ.ಎಸ್​.ಈಶ್ವರಪ್ಪ, ಆರ್​.ಅಶೋಕ್​, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ.ಮಾಧುಸ್ವಾಮಿ, ಅರಗಜ್ಞಾನೇಂದ್ರ, ಡಾ. ಅಶ್ವಥ ನಾರಾಯಣ, ಸಿ.ಸಿ.ಪಾಟೀಲ್​, ಆನಂದ್​ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ​, ಪ್ರಭು ಚೌಹ್ವಾಣ್​, ಮುರುಗೇಶ್​ ನಿರಾಣಿ, ಶಿವರಾಂ​ ಹೆಬ್ಬಾರ್​, ಎಸ್​.ಟಿ. ಸೋಮಶೇಖರ್​, ಬಿ.ಸಿ.ಪಾಟೀಲ್, ಬಸವರಾಜ ಬೈರತಿ​, ಡಾ.ಕೆ.ಸುಧಾಕರ್​, ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್​, ಕೆ.ಸಿ.ನಾರಾಯಣಗೌಡ, ಬಿ.ಸಿ.ನಾಗೇಶ್​, ಸುನಿಲ್​ ಕುಮಾರ್​, ಆಚಾರ್ ಹಾಲಪ್ಪ ಬಸಪ್ಪ, ಶಂಕರ್ ಪಾಟೀಲ್ ಮುನೇನಕುಪ್ಪ, ಮುನಿರತ್ನ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಹುತೇಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಪ್ರಭುಚೌವ್ಹಾಣ್​ ಅವರು ದೇವರ ಮತ್ತು ಗೋಮಾತೆ ಹೆಸರಿನಲ್ಲಿ, ಮುರುಗೇಶ ನಿರಾಣಿ ಅವರು ದೇವರು ಮತ್ತು ರೈತರ ಹೆಸರಿನಲ್ಲಿ, ಶಿವರಾಂ ಹೆಬ್ಬಾರ್ ಅವರು ದೇವರ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ, ಬಿ.ಸಿ. ಪಾಟೀಲ್ ಅವರು ರೈತರು ಮತ್ತು ಬಸವಣ್ಣ ಹೆಸರಿನಲ್ಲಿ, ಶಶಿಕಲಾ ಜೊಲ್ಲೆ ಅವರು ದೇವರ ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ, ಶಂಕರ್ ಪಾಟೀಲ್ ಮುನೇನಕುಪ್ಪ ಅವರು ದೇವರ ಮತ್ತು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್​ಸಿಂಗ್​ ಉಪಸ್ಥಿತರಿದ್ದರು. ಪ್ರಮಾಣವಚನ ಸ್ವೀಕರಿಸಲು ಲಂಬಾಣಿ ಉಡುಪು ಧರಿಸಿ ಆಗಮಿಸಿದ್ದ ಪ್ರಭುಚೌವ್ಹಾಣ್​ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ರಾಜಭವನ ಮುಂದೆ ಡಾ.ಕೆ. ಸುಧಾಕರ್ ಫೋಟೋ ಹಿಡಿದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಕಾರ್ಯಕ್ರಮಕ್ಕೆ ಶಶಿಕಲಾ ಜೊಲ್ಲೆ ಅವರು 25 ನಿಮಿಷ ತಡವಾಗಿ ಆಗಮಿಸಿದರು.
ರಾಜಭವನದ ಹೊರಗಡೆ ಎಲ್​ಇಡಿ ಪರದೆ ಅಳವಡಿಸಿ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು. ರಾಜಭವನದ ಒಳಗೆ ಹೊಗಲಾಗದವರು ಎಲ್​ಇಡಿ ಪರದೆ ಮೂಲಕ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಿಸುತ್ತಿದ್ದರು.
ಪ್ರಮಾಣವಚನ ಸ್ವೀಕರಿಸಲು 25 ನಿಮಿಷ ತಡವಾಗಿ ಓಡೋಡಿ ಬಂದ ಶಶಿಕಲಾ ಜೊಲ್ಲೆ!

ಯಡಿಯೂರಪ್ಪ ಮುಂದೆ ಕಣ್ಣೀರಿಟ್ಟ‌ ರೇಣುಕಾಚಾರ್ಯ! ಅನ್ಯಾಯ ಆಗಿದೆ…

ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದವರಿಗೆ ಶಾಕ್​! ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇಲ್ಲ

ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 16 =
Remember me
