ಕೊಪ್ಪಳ:ಹಸು ಹಿಡಿದುಕೊಂಡು ಜಮೀನಿಗೆ ಹೋಗುತ್ತಿದ್ದ ರೈತರಿಬ್ಬರ ಹಿಂಬದಿಯಿಂದ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ರೈತರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಸು ಕೂಡ ದುರಂತ ಅಂತ್ಯ ಕಂಡಿದೆ.
ಇಂತಹ ದುರ್ಘಟನೆ ಕೊಪ್ಪಳ‌ ಜಿಲ್ಲೆ ಯಲಬುರ್ಗಾ ತಾಲೂಕು ಗುನ್ನಾಳ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಗುನ್ನಾಳ ಗ್ರಾಮದ ರೈತರಾದ ಹೊಳೆಯಪ್ಪ(48) ಮತ್ತು ರಾಮಣ್ಣ (42) ಮೃತರು. ಇವರಿಗೆ ಸೇರಿದ ಹಸು ಕೂಡ ಅಪಘಾತದಲ್ಲಿ ಮೃತಪಟ್ಟಿದೆ. ಶೇಂಗಾ ಕೀಳಲು ಜಮೀನಿಗೆ ಇವರಿಬ್ಬರೂ ಹೋಗುತ್ತಿದ್ದರು. ವೇಳೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ರೈತರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ನಂತರ ಕಾರನ್ನೇ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
