ಬೆಳಗಾವಿ:19 ದಿನಗ ಹಿಂದೆ ನಗರದ ಗಾಲ್ಫ್ ಮೈದಾನ, ಜಾಧವ ನಗರದ ಪೊದೆಯೊಳಗೆ ಕಾಣಿಸಿಕೊಂಡಿದ್ದ ಚಿರತೆ ಪತ್ತೆಗೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಶಸ್ತ್ರಸಹಿತ ನೂರಾರು ಸಿಬ್ಬಂದಿಯೊಂದಿಗೆ ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಕಣ್ಣಾಮುಚ್ಚಾಲೆ ಆಟದಂತೆ ತಪ್ಪಿಸಿಕೊಳ್ಳುತ್ತಿದೆ. ಇಂದು(ಸೋಮವಾರ) ಬೆಳಗ್ಗೆ ಕಣ್ಣಿಗೆ ಬಿದ್ದ ಚಿತರೆಯನ್ನ ಇನ್ನೇನು ಹಿಡಿಯಬೇಕು ಅನ್ನುವಷ್ಟರಲ್ಲಿ ಚಿರತೆ ತಪ್ಪಿಸಿಕೊಂಡು ಓಡಿದೆ. ಸ್ಥಳೀಯರಲ್ಲಿ ಚಿರತೆ ಮತ್ತಷ್ಟು ಭಯ ಹುಟ್ಟಿಸಿದ್ದು, ಇಂದು ಕೂಡ ನಗರ ಹಾಗೂ ಗ್ರಾಮೀಣ ಭಾಗದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇಂದು ಬೆಳಗ್ಗೆ 6.15ಕ್ಕೆ ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಬಳಿಯ ಡಬಲ್ ರೋಡ್​ನಲ್ಲಿ ಪ್ರತ್ಯಕ್ಷವಾಗಿತ್ತು. ಬಸ್ ಚಾಲಕರೊಬ್ಬರು ರಸ್ತೆಯಲ್ಲಿ ಚಿರತೆ ಹೋಗುತ್ತಿದ್ದ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು. ರಸ್ತೆ ದಾಟಿ ಗಾಲ್ಫ್ ಮೈದಾನದಲ್ಲಿ ಹೋದ ಚಿರತೆಯನ್ನ ಹಿಡಿಯಲು ಅರಣ್ಯ ಮತ್ತು ಪೊಲೀಸ್​ ಸಿಬ್ಬಂದಿ ಬಲೆ, ಅರವಳಿಕೆ ಗನ್ ಹಾಗೂ ಲಾಠಿ ಹಿಡಿದು ಕೊಂಬಿಂಗ್ ಆರಂಭಿಸಿದ್ದರು. ಸಿಡಿಮದ್ದು ಸಿಡಿಸಿ, ಶಿಳ್ಳೆ ಕೂಗುತ್ತಾ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರು. ವನಿತಾ ವಿದ್ಯಾಲಯದ ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಚಿರತೆಯನ್ನ ಇನ್ನೇನು ಹಿಡಿಯಬೇಕು ಅನ್ನುವಷ್ಟರಲ್ಲಿ ಚಿರತೆ ತಪ್ಪಿಸಿಕೊಂಡು ಓಡಿದೆ.
ಅರಣ್ಯ ಇಲಾಖೆ, ಪೊಲೀಸರು ಹಾಗೂ ಜಿಲ್ಲಾಧಿಕಾರಿ ಅವರ ಎದುರೇ ಚಿರತೆ ತಪ್ಪಿಸಿಕೊಂಡು ಓಡಿದೆ. ಸಿಬ್ಬಂದಿ ಶಸ್ತ್ರ ಸಜ್ಜಿತವಾಗಿ ಬಲೆ ಹಿಡಿದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಮಾತ್ರ ಸಿಕ್ಕಿಲ್ಲ, ಮತ್ತೆ ಚಿರತೆ ಹಿಡಿಯುವ ಕಾರ್ಯಾಚರಣೆ ವಿಫಲವಾಗಿದೆ.
ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ ಹಿಂದಿನ ಭಾಗದಲ್ಲಿ ಇನ್ನೇನು ಹಿಡಿಯಬೇಕು ಅನ್ನುವಷ್ಟರಲ್ಲಿ ಚಿರತೆ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯವಿಜಯವಾಣಿಫೋಟೋಗ್ರಾಫರ್ಅರುಣ ಯಳ್ಳೂರಕರಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ…
ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ನಿಧನ

ರಾತ್ರೋರಾತ್ರಿ ಕಾಂಗ್ರೆಸ್ ಕಚೇರಿಯಲ್ಲಿ ರಾರಾಜಿಸಿದ ಸಾವರ್ಕರ್​ ಫೋಟೋ!

PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
