ಚಾಮರಾಜನಗರ:ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಭಾನುವಾರ ತಡರಾತ್ರಿ 20ಕ್ಕೂ ಹೆಚ್ಚು ಜನ ಕರೊನಾ ಸೋಂಕಿತರು ಪ್ರಾಣಬಿಟ್ಟಿ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಆಕ್ಸಿಜನ್​ ಹಾಹಾಕಾರ ಭೀಕರತೆಗೆ ಚಾಮರಾಜಗರದಲ್ಲಿನ ಈ ಘಟನೆಯೇ ಸಾಕ್ಷಿ. ಆಕ್ಸಿಜನ್​ ಇಲ್ಲದೆ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಒಳಗೆ ಹೆಣವಾಗಿದ್ದರೆ, ಆಸ್ಪತ್ರೆ ಹೊರಗೆ ಮತ್ತೊಬ್ಬನ ಶವ ಅನಾಥವಾಗಿ ಬಿದ್ದಿದ್ದ ದೃಶ್ಯ ಸೋಮವಾರ ಬೆಳಗ್ಗೆ ಕಂಡು ಬಂದಿದೆ.
ಆಸ್ಪತ್ರೆಯ ಶವಗಾರದ ಸಮೀಪ ಸುಮಾರು 40ರಿಂದ 50 ವರ್ಷ ವಯಸ್ಸಿನ ಪುರುಷನ ಶವ ಬಿದ್ದಿದೆ. ಈತನಿಗೆ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರಸ್ತೆಬದಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.ಇದನ್ನೂ ಓದಿರಿ‘ಸುಮಕ್ಕಾ ಎಲ್ಲಿದ್ದೀಯಾಕ್ಕಾ?’ ಜಾಲತಾಣದಲ್ಲಿ ಪೋಸ್ಟರ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಸ್ವಾಭಿಮಾನಿ ಸಂಸದೆ
ನಿನ್ನೆ ಒಂದೇ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಮಂದಿ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.
ಇತ್ತ ಮೃತರ ಅಂತ್ಯಸಂಸ್ಕಾರಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್​ ಕೊರತೆ ಕಾಡುತ್ತಿದೆ. ಸದ್ಯ 2 ಆಂಬುಲೆನ್ಸ್​ ಲಭ್ಯವಿದ್ದು, ಒಂದು ಶವ ಸಂಸ್ಕಾರಕ್ಕೆ ಒಂದು ಗಂಟೆ ಸಮಯ ಬೇಕು. ಇರೋ ಎರಡು ಆಂಬುಲೆನ್ಸ್​ನಲ್ಲಿಯೇ ಒಂದೊಂದೇ ಶವಗಳನ್ನ ಶವಾಗಾರಕ್ಕೆ ಸಾಗಿಸುತ್ತಿದ್ದಾರೆ.
ಇತ್ತ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕರೊನಾ ಸೋಂಕಿತರಿಗೆ ಸರಿಯಾಗಿ ಸಿಗುತ್ತಿಲ್ಲ ಆಕ್ಸಿಜನ್ ಸಿಗುತ್ತಿಲ್ಲ. ಹಾಗಾಗಿಯೇ ನಮ್ಮವರು ಬಲಿಯಾದರು ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕರೊನಾ ಹಿನ್ನೆಲೆ ಕೂಲಿ ಸಿಗ್ತಿಲ್ಲ, ಸಾಲ ತೀರಿಸೋಕೆ 3 ತಿಂಗಳು ಟೈಂ ಕೊಡಿ…ಇಲ್ಲಾಂದ್ರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ತೀವಿ…

ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
