ಚಾಮರಾಜನಗರ:ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ರಾಜ್ಯದ ಜನತೆಯನ್ನ ತಲ್ಲಣಗೊಳಿಸಿದ್ದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರ ಸಾವಿನ ಪ್ರಕರಣದ ಡೆತ್​ ಆಡಿಟ್​ ರಿಪೋರ್ಟ್​ ಬಹಿರಂಗಗೊಂಡಿದೆ.
ಮೇ 2ರಿಂದ 3ರವರೆಗೆ ಜಿಲ್ಲೆಯಲ್ಲಿ 24 ಮಂದಿ ಕೋವಿಡ್​ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ 23 ಮಂದಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿದ್ದವರು. ಮತ್ತೊಬ್ಬರು ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದರು.
24 ಮಂದಿ ಪೈಕಿ 16 ಮಂದಿ ಕೋಮ್ ಆರ್ಬಿಡಿಟಿಯಿಂದ(ಇತರ ರೋಗ ಸಮಸ್ಯೆ ಹೊಂದಿದ್ದವರು) ಸತ್ತಿದ್ದಾರೆ. ಮೂವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆಯ ಮಂಜುಳಾ ಹೊಸೂರು, ಚಾಮರಾಜನಗರ ನಗರದ ಮೋಹನ್ ರಾಜ್‌ ಮೆಗಾವತ್, ಚಾಮರಾಜನಗರ ತಾಲೂಕಿನ ಮಹದೇವಸ್ವಾಮಿ ಯರಿಯೂರು ಎಂಬುವರು ಆಕ್ಸಿಜನ್​ ಕೊರತೆಯಿಂದ ಸತ್ತಿದ್ದಾರೆ. ಉಳಿದವರು ಆಮ್ಲಜನಕ ಕೊರತೆ ಪರಿಣಾಮ ಐಫಾಕ್ಸಿಕ್ ಬ್ರೈನ್ ಇಂಜೂರಿಯಿಂದ ಮೃತಪಟ್ಟಿದ್ದಾರೆ ಎಂದು ಡೆತ್ ರಿಪೋರ್ಟ್​ನಲ್ಲಿ ಉಲ್ಲೇಖವಾಗಿದೆ.
ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ! ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ…

ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
