ಕೊಳ್ಳೇಗಾಲ:‘ಪಪ್ಪಾ ನಾನು ತುಂಬಾ ಫ್ಯಾಟ್​ ಇದ್ದೀನಿ… ಐ ಹ್ಯಾಮ್​ ಸಾರಿ ಪಪ್ಪಾ…’ ಎಂದು ತಂದೆ ಮೊಬೈಲ್​ಗೆ ಮಧ್ಯರಾತ್ರಿ ಸಂದೇಶ ರವಾನಿಸಿದ ಮಗ, ಅಪಾರ್ಟ್​ಮೆಂಟ್​ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಟ್ಟಣದ ಭಾವನಾ ಹಾರ್ಡ್​ವೇರ್​ ಮಾಲೀಕ ಜೆ.ಎಸ್​.ರಾಮ್​ಮೋಹನ್​ ಹಾಗೂ ಆರ್​.ಆಶಾ ಮೋಹನ್​ ದಂಪತಿಯ ಏಕೈಕ ಪುತ್ರ ಜೆ.ಆರ್​.ಅಂಜನ್​(18) ಮೃತ ದುರ್ದೈವಿ. ಈತ ಬೆಂಗಳೂರಿನ ಜೈನ್​ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಕನಕಪುರ ರಸ್ತೆಯ ಕೋಣನಕುಂಟೆಯಲ್ಲಿ ದೊಡ್ಡಪ್ಪ ಚೇತನ್​ ಅವರ ಅಪಾರ್ಟ್​ಮೆಂಟ್​ನಲ್ಲಿ ಒಬ್ಬನೇ ವಾಸವಿದ್ದ. ಸೋಮವಾರ ಮುಂಜಾನೆ 3.30ರ ಸಮಯದಲ್ಲಿ ತಂದೆ ಮೊಬೈಲ್​ಗೆ “ಪಪ್ಪಾ ನಾನು ತುಂಬಾ ಫ್ಯಾಟ್​.. ಐ ಹ್ಯಾಮ್​ ಸಾರಿ ಪಪ್ಪಾ’. ಎಂದು ಸಂದೇಶ ಹಾಗೂ ವಿಡಿಯೋವೊಂದನ್ನು ಕಳುಹಿಸಿದ್ದಾನೆ.
ಬೆಳಗ್ಗೆ ಎದ್ದು ಮೊಬೈಲ್​ ನೋಡಿದ ಪಾಲಕರಿಗೆ ಬರಸಿಡಿಲು ಬಡಿದಂತಾಗಿದೆ. ಕೂಡಲೇ ಅಂಜನ್​ಗೆ ಫೋನ್ ಮಾಡಿದರೂ​ ಕರೆ ಸ್ವೀಕರಿಸಿಲ್ಲ. ಇದೇ ವೇಳೆಗೆ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಬೇರೆಯವರು ಯುವಕನ ತಂದೆ ರಾಮ್​ಮೋಹನ್​ಗೆ ಫೋನ್​ ಮಾಡಿ ನಡೆದಿರುವ ಘಟನೆ ತಿಳಿಸಿದ್ದಾರೆ.
ತಕ್ಷಣ ಪಾಲಕರು ಬೆಂಗಳೂರಿಗೆ ಹೋಗಿ ನೋಡಿದಾಗ ಮಹಡಿ ಮೇಲಿಂದ ಕೆಳಗೆ ಬಿದ್ದಿರುವ ಸ್ಥಿತಿಯಲ್ಲಿ ಅಂಜನ್​ ಮೃತದೇಹ ಸಿಕ್ಕಿದೆ. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದಾರೆ. ಅಂಜನ್​ ಕೊನೆಯದಾಗಿ ಕಳುಹಿಸಿರುವ ವಿಡಿಯೋವನ್ನು ಪೊಲೀಸರಿಗೆ ತಂದೆ ನೀಡಿದ್ದಾರೆ.
ಆರು ಕಾಲು ಅಡಿ ಎತ್ತರ ಹಾಗೂ ಗಾತ್ರದಲ್ಲಿ ದಪ್ಪಗಿದ್ದ ಹಿನ್ನೆಲೆ ಅಂಜನ್​ ಅನ್ನು ಎಲ್ಲರೂ ‘ನೀನು ತುಂಬಾ ದಪ್ಪ ಇದ್ದೀಯಾ’ ಎಂದು ಚುಡಾಯಿಸುತ್ತಿದ್ದರು. ಕೆಲ ತಿಂಗಳ ಹಿಂದೆ ತನ್ನ ಪಾಲಕರ ಬಳಿ ಅಂಜನ್​ ನೋವು ತೋಡಿಕೊಂಡಿದ್ದ. ಇದಕ್ಕೆಲ್ಲಾ ನೊಂದುಕೊಳ್ಳಬಾರದು. ನಮ್ಮ ಕುಟುಂಬದಲ್ಲಿ ಎಲ್ಲರೂ ದಪ್ಪಗಿದ್ದಾರೆ. ನಿನ್ನ ಓದಿನ ಕಡೆ ಹೆಚ್ಚು ಗಮನಹರಿಸು ಎಂದು ಪಾಲಕರು ಸಮಾಧಾನ ಮಾಡಿದ್ದರು. ಆದರೆ ಅಂಜನ್​ ಸಾವಿನ ಮನೆಯ ಕದ ತಟ್ಟಿದ್ದು ದುರಂತ.
ಮರಣೋತ್ತರ ಪರೀಕ್ಷೆ ಬಳಿಕ ಕೊಳ್ಳೇಗಾಲದ ದಾಸನಪುರ ಗ್ರಾಮದ ಬಳಿಯ ಕಾವೇರಿ ನದಿ ತೀರದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆದಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಯುವಕ-ಯುವತಿ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನಿಗೆ ಜೈಲು ಶಿಕ್ಷೆ! ಬೆಳಗಾವಿಯಲ್ಲಿ ವಿಚಿತ್ರ ಘಟನೆ

ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ

ಕುರಾನ್​ ಹೇಳಿದ್ದೇ ನಮಗೆ ಫೈನಲ್​, ಹೈಕೋರ್ಟ್​ ತೀರ್ಪು ಪಾಲಿಸಲ್ಲ… ಹಿಜಾಬ್​ ಪರ ಮತ್ತೆ ಗುಡುಗಿದ ಉಡುಪಿ ವಿದ್ಯಾರ್ಥಿನಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + six =
Remember me
