ಆನೇಕಲ್​:ತನ್ನ ತಮ್ಮನ ಎರಡು ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿ ಆ ಪುಟ್ಟ ಕಂದನ ಸಾವಿಗೆ ಕಾರಣನಾಗಿ ಬಂಧನಕ್ಕೊಳಗಾಗಿದ್ದವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲೇ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಮೃತ. ಮಾ.28ರಂದು ಪೋಕ್ಸೋ ಕಾಯ್ದೆಯಡಿ ದೀಪುನನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಶನಿವಾರ ಮುಂಜಾನೆ 5.25ಕ್ಕೆ ಜೈಲಿನ ಸ್ನಾನದ ಕೋಣೆಗೆ ಹೋದ ದೀಪು, ಬೆಡ್​ಶೀಟ್​ನಿಂದ ಅಲ್ಲಿನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ತಿಂಗಳು 2 ವರ್ಷದ ಕಂದಮ್ಮನ ಮೇಲೆ ಕಾರಿನಲ್ಲೇ ಅತ್ಯಾಚಾರವೆಗಿದ್ದ. ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟಿತ್ತು.
ಅತ್ತಿಬೆಲೆ ಸಮೀಪದ ನೆರಳೂರಲ್ಲಿ ವಾಸವಿದ್ದ ದೀಪು, ಬೇರೆ ಊರಿನಲ್ಲಿ ವಾಸವಾಗಿದ್ದ ತನ್ನ ಕಿರಿಯ ಸೋದರನ ಮನೆಗೆ ಹೋಗಿದ್ದ. ತಮ್ಮನ ಮಗಳನ್ನು ಮತ್ತೊಂದು ಊರಿಗೆ ಕರೆತಂದಿದ್ದ ದೀಪು, ಮಾ.20ರಂದು ಮಗುವನ್ನು ಮರಳಿ ತನ್ನ ಸಹೋದರನಿದ್ದ ಊರಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ತನ್ನೊಂದಿಗೆ ಸ್ನೇಹಿತನೊಬ್ಬನನ್ನೂ ಕರೆತಂದಿದ್ದ. ಮಾರ್ಗ ಮಧ್ಯೆ ಸ್ನೇಹಿತನನ್ನು ಕೆಳಗಿಳಿಸಿ, ಮದ್ಯ ತರುವಂತೆ ಹೇಳಿದ್ದ. ಸ್ನೇಹಿತ ಅತ್ತ ಹೋಗುತ್ತಲೇ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ. ಕಾಮುಕ ದೊಡ್ಡಪ್ಪನ ಪೈಶಾಚಿಕ ಕೃತ್ಯಕ್ಕೆ ನಲುಗಿದ್ದ ಮಗುವಿನ ಉಸಿರು ಸ್ತಬ್ಧವಾಗಿತ್ತು. ತೀವ್ರ ರಕ್ತಸ್ರಾವವಾಗಿತ್ತು.
ಅತ್ಯಾಚಾರ ಎಸಗಿದ ಬಳಿಕ ಮಗು ಸ್ತಬ್ಧವಾಗಿದ್ದನ್ನು ಕಂಡು ಆತಂಕಗೊಂಡ ದೀಪು, ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಗುವಿನ ತಲೆಗೆ ಗಾಯ ಆಗಿದೆ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ. ಆದರೆ, ಮಗು ಮೃತಪಟ್ಟಿತ್ತು. ಅತ್ತಿಬೆಲೆ ಪೊಲೀಸ್​ ಠಾಣೆಗೆ ತಾನೇ ಹೋಗಿ, ಹಠಾತ್ತನೆ ಕಾರಿನ ಬ್ರೇಕ್​ ಹಾಕಿದ್ದರಿಂದ, ಬಿದ್ದು ತಲೆಗೆ ಗಾಯವಾಗಿ ಮಗು ಮೃತಪಟ್ಟಿದ್ದಾಗಿ ದೂರು ದಾಖಲಿಸಿದ್ದ. ಆದರೆ, ಆತನ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದರು. ಆದ್ದರಿಂದ, ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸು ಮಾಡಿದ್ದರು. ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿತ್ತು. ವಿಕೃತಕಾಮಿ ದೊಡ್ಡಪ್ಪ ದೀಪುನನ್ನು ಪೋಕ್ಸೋ ಅಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಕಾರಾಗೃಹದಲ್ಲೇ ಬೆಡ್​ಶೀಟ್​ನಿಂದ ದೀಪು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಟ ರವಿಚಂದ್ರನ್​ಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್

ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
