ದೆಹಲಿ:ಪಾರ್ಲೆ-ಜಿ ಅಂದಾಕ್ಷಣ ಕಣ್ಮುಂದೆ ಬರುತ್ತೆ ಬಿಸ್ಕತ್ತು, ಮಿಠಾಯಿ. ಅಷ್ಟರಮಟ್ಟಿಗೆ ಹೆಸರುವಾಸಿ ಪಾರ್ಲೆ-ಜಿ ಪ್ರಾಡೆಕ್ಟ್​. ಇದೀಗ ಈ ಪಾರ್ಲೆ-ಜಿ ಗೋಧಿ ಹಿಟ್ಟು ಮಾರಾಟಕ್ಕೂ ಬಂಡವಾಳ ಹೂಡಿದೆ. ಈ ಬಗ್ಗೆ ಪಾರ್ಲೆ-ಜಿ ಕಂಪನಿಯು ಇಂದು ಅಧಿಕೃತವಾಗಿ ಘೋಷಿಸಿದೆ.
ಈ ಕಂಪನಿಯ ಗೋಧಿ ಹಿಟ್ಟು ‘ಪಾರ್ಲೆ-ಜಿ ಚಕ್ಕಿ ಹಿಟ್ಟು’ ಬ್ರ್ಯಾಂಡ್​ನಡಿ ಮಾರುಕಟ್ಟೆ ಪ್ರವೇಶಿಸಿದೆ. ಸದ್ಯ ಈ ಹಿಟ್ಟು ದೇಶದ ಉತ್ತರ ಮತ್ತು ಪಶ್ಚಿಮ ವಲಯಗಳಲ್ಲಿ ಲಭ್ಯವಿದ್ದು, 2 ಕೆಜಿ, 5 ಕೆಜಿ ಮತ್ತು 10 ಕೆಜಿ ತೂಕದ ಹಿಟ್ಟಿನ ಪ್ಯಾಕೇಟ್​ಗಳು ಮಾರುಕಟ್ಟೆಯಲ್ಲಿ ಮಳಿಗೆಗಳನ್ನ ಪ್ರವೇಶಿಸಿವೆ. ನಗರ ಮತ್ತು ಗ್ರಾಮೀಣ ಮಾರುಕಟ್ಟೆ ಎರಡನ್ನೂ ಕೇಂದ್ರೀಕರಿಸಿ ಪಾರ್ಲೆ-ಜಿ ಚಕ್ಕಿ ಹಿಟ್ಟನ್ನು ಸರಬರಾಜು ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ವಿಶ್ವಾಸಾರ್ಹ ಬ್ರ್ಯಾಂಡ್‌ನ ಭರವಸೆಯೊಂದಿಗೆ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನ ಗ್ರಾಹಕರನ್ನು ಪಾರ್ಲೆ-ಜಿ ಚಕ್ಕಿ ಹಿಟ್ಟು’ ತಲುಪಲಿದೆ ಎಂದು ಪಾರ್ಲೆ ಪ್ರಾಡಕ್ಟ್ಸ್‌ನ ಸೀನಿಯರ್ ವಿಭಾಗದ ಮುಖ್ಯಸ್ಥ ಮಾಯಾಂಕ್ ಶಾ ಹೇಳಿದ್ದಾರೆ.
ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
