ಮಂಡ್ಯ:ನಿಷೇಧವಿದ್ದರೂ ಕೆಆರ್​ಎಸ್​ ಹಿನ್ನೀರಲ್ಲಿ ಮೋಜು ಮಸ್ತಿಗೆ ಬಂದಿದ್ದ ನಾಲ್ವರು ಯುವಕರು ಮತ್ತು ನಾಲ್ವರು ಯುವತಿಯರ ಮೇಲೆ ಕೆಆರ್​ಎಸ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಆರೋಪಿಗಳಿಂದ 2 ಕಾರನ್ನು ಸೀಜ್​ ಮಾಡಲಾಗಿದೆ.
ಕರೊನಾ ಲಾಕ್​ಡೌನ್​ ಜಾರಿಯಲ್ಲಿದ್ದರೂ ಲೆಕ್ಕಿಸದೆ ಮೈಸೂರು ಮೂಲದ ಯುವಕರ ತಂಡ ಯುವತಿಯರೊಂದಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಹಿನ್ನಿರಿನ ಬಳಿ ಪಾರ್ಟಿ ಮಾಡಲು ಬಂದಿತ್ತು. ಅಲ್ಲಿಗೆ ಬಂದ ಕೆಆರ್​ಎಸ್​ ಭದ್ರತಾ ಪಡೆ ಪೊಲೀಸರು, ಯುವಕರ ಮೋಜು-ಮಸ್ತಿಗೆ ಬ್ರೇಕ್​ ಹಾಕಿದ್ದರು. ಈ ವೇಳೆ ಪೊಲೀಸರಿಗೆ ಅವಾಜ್ ಹಾಕಿ ಬೆದರಿಕೆ ಹಾಕಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್​ ಅಧಿಕಾರಿ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದೀಗ ಈ ಪ್ರಕರಣ ಸಂಬಂಧ ಎಂಟು ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಲಾಕ್​ಡೌನ್ ನಡುವೆ ಜಿಲ್ಲಾ ಗಡಿ ದಾಟಿ ಬಂದಿದ್ದಲ್ಲದೆ, ನಿಷೇಧವಿದ್ದರೂ ಕೆಆರ್​ಎಸ್​ ಹಿನ್ನೀರು ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿಯೇ ಮದ್ಯಪಾನ ಮಾಡಿದ್ದಾರೆ ಎಂಬ ಆರೋಪ ಈ ಯುವ ತಂಡ ಮೇಲಿದೆ.
ಮಹಾವಂಚಕಿಗೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್​ ನಟ? ಸಾವಿರಾರು ಕೋಟಿ ರೂ. ರಹಸ್ಯ ಬಯಲು

ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಪ್ಪಲಿ ಹಾರ ಹಾಕಿ ತಲೆ ಬೋಳಿಸಿ ಮೆರವಣಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
