ತುಮಕೂರು:ತಮ್ಮ ಊರಿನ ಕೆರೆ ಕೋಡಿ ಬಿದ್ದ ಖುಷಿಗೆ ಗ್ರಾಮದ ಮಹಿಳೆಯರು ಕೆರೆ ನೀರಲ್ಲೇ ನಿಂತು ಭರ್ಜರಿ ಡಾನ್ಸ್​ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, ಮಹಿಳೆಯರ ಸಂತಸ ಕಂಡು ನೆಟ್ಟಿಗರೂ ಖುಷಿಯಾಗಿದ್ದಾರೆ.
ಇತ್ತೀಚಿಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಾವಗಡ ತಾಲೂಕಿನ ಗೌಡನಕುಂಟೆ ಗ್ರಾಮ‌ದ ಕೆರೆ ಕೋಡಿಯಾಗಿದೆ. ಬರೋಬ್ಬರಿ 42 ವರ್ಷದ ಬಳಿಕ ಈ ಕೆರೆ ಕೋಡಿ ಬಿದ್ದಿದ್ದು, ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲ. ಕೆರೆ ಕೋಡಿ ಬಿದ್ದ ಸಂಭ್ರಮದಲ್ಲಿ ಗೌಡನಕುಂಟೆ ಗ್ರಾಮದ ಮಹಿಳೆಯರು ಮಳೆ ನೀರಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ವೃದ್ಧೆಯರಿಂದ ಹಿಡಿದು ಹೆಣ್ಣುಮಕ್ಕಳೂ ನೀರಲ್ಲಿ ಡಾನ್ಸ್​ ಮಾಡಿದ್ದು, ಸ್ಥಳೀಯರ‌ ಮೊಬೈಲ್​ನಲ್ಲಿ‌ ಈ ದೃಶ್ಯ ಸೆರೆಯಾಗಿದೆ.
ಅಬ್ಬಬ್ಬಾ, ಕೋಡಿ ಬಿದ್ದ ಕೆರೆಯಲ್ಲಿ ಮೀನುಗಳ ನರ್ತನ..? ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

Sign in to your account
Please enter an answer in digits:two × 4 =
Remember me
