ತುಮಕೂರು:ಪಾವಗಡ ತಾಲೂಕಿನ ಪಳವಳ್ಳಿ ಕೆರೆ ಬಳಿ ಖಾಸಗಿ ಬಸ್ ದುರಂತ ನಡೆದ ಬಳಿಕ ಎಚ್ಚೆತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವೈ.ಎನ್​.ಹೊಸಕೋಟೆಯಿಂದ ಪಾವಗಡಕ್ಕೆ 7 ಗ್ರಾಮೀಣ ಸಾರಿಗೆ ಬಸ್​ಗಳ ಸಂಚಾರ ಆರಂಭಿಸಿದೆ.
ಪಾವಗಡ ತಾಲೂಕು ಕೆಎಸ್​ಆರ್​ಟಿಸಿ ನಿಗಮದಿಂದ ವೈ.ಎನ್​. ಹೊಸಕೋಟೆ ಹೋಬಳಿಗೆ 7 ಸಾರಿಗೆ ಬಸ್​ಗಳು ಭಾನುವಾರದಿಂದ ಸಂಚಾರ ಆರಂಭಿಸಿವೆ. ಈ ಹಿಂದೆ ತುಮಕೂರು ಘಟಕ ಇದ್ದಾಗ 200 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. 60 ಬಸ್​ಗಳು ಸಂಚರಿಸುತ್ತಿದ್ದವು. ಪ್ರಸ್ತುತ 123 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 43 ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಗ್ರಾಮೀಣ ಸಾರಿಗೆ ಸೇವೆ ಕಡಿತಗೊಳಿಸಲಾಗಿದೆ. ತುಮಕೂರಿನಿಂದ ಈಗ ಚಿತ್ರದುರ್ಗ ಘಟಕಕ್ಕೆ ಸೇರಿದೆ ಎಂದು ಡಿಪೋ ಮಾನೇಜರ್​ ಹನುಮಂತರಾಯಪ್ಪ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್​ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದಾರೆ. ಈ ದುರಂತದ ಬಳಿಕ ಪಾವಗಡದಿಂದ ವೈ.ಎನ್​. ಹೊಸಕೋಟೆ ಮಾರ್ಗದಲ್ಲಿ ಸಾಕಷ್ಟು ಸಾರಿಗೆ ಬಸ್​ಗಳ ಸಂಚಾರ ಓಡಾಟ ಆರಂಭವಾಗಿದೆ. ಈ ಬಸ್​ ಸೇವೆ ನಿರಂತರವೋ ಆಥವಾ ತಾತ್ಕಾಲಿಕವೋ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವೈ.ಎನ್​.ಹೊಸಕೋಟೆಯ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ
ಆನೇಕಲ್​ನಲ್ಲಿ ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ… ಆಮೇಲೆ ಆಗೋದೇ ಬೇರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
