ಬೆಂಗಳೂರು:ನಗರದ ಕೆಲವೆಡೆ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ರಾತ್ರೋರಾತ್ರಿ ಸಿಎಂ ಬೊಮ್ಮಾಯಿ‌ ಫೋಟೋ ಸಹಿತ ‘ಪೇ ಸಿಎಂ’ ಪೋಸ್ಟರ್​ ಅಂಟಿಸಿ ಕಾಂಗ್ರೆಸ್​ ಅಭಿಯಾನ ನಡೆಸಿದೆ.ರೇಸ್ ಕೋರ್ಸ್ ರೋಡ್​ ಸೇರಿದಂತೆ ಬೆಂಗಳೂರು ನಗರದ ಹಲವೆಡೆ QR ಕೋಡ್‌ ಇರುವ ‘PAY CM’ ಪೋಸ್ಟರ್‌ಗಳು ಕಂಡು ಬಂದಿದ್ದು, ಈ ಪೋಸ್ಟರ್​ ವಿರುದ್ಧ ಸಿಎಂ ಗರಂ ಆಗಿದ್ದಾರೆ.
ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್​, ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಚಾಟಿ ಬೀಸುತ್ತಿದೆ. ಇನ್ನು ಈ ಪೋಸ್ಟರ್​ ಹಾಕಿದ್ದು ಯಾರೆಂದು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಪೋಸ್ಟರ್​ ಅಂಟಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ರೇಸ್ ಕೋರ್ಸ್ ಬಳಿ ಹಾಕಿದ್ದ ‘ಪೇಸಿಎಂ’ ಪೋಸ್ಟರ್​ಗಳನ್ನು ಪೊಲೀಸ್ ಸಿಬ್ಬಂದಿಗಳು ಕಿತ್ತುಹಾಕಿದ್ದಾರೆ. ಇನ್ನು ಕೆಲವೆಡೆ ಆಟೋ ಡ್ರೈವರ್​ಗಳು ಮತ್ತು ಸಾರ್ವಜನಿಕರು ಹಣ ಬರುತ್ತೆ ಎಂದು ಸ್ಕ್ಯಾನ್ ಮಾಡುತ್ತಿದ್ದ ದೃಶ್ಯವೂ ಕಂಡು ಬಂತು. ‘ಪೇ ಸಿಎಂ’ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿದರೆ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್​ ಆರೋಪ, ಪಿಎಸ್​ಐ ಎಕ್ಸಾಂ ಹಗರಣ ಸೇರಿದಂತೆ ಹಲವು ಮಾಹಿತಿ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಯಾರು ಪೋಸ್ಟರ್ ಹಾಕಿದ್ದಾರೆ ಅವರನ್ನು ಪತ್ತೆ ಮಾಡಲಾಗ್ತಿದೆ. ಈ ಬಗ್ಗೆ ಡಿಸಿಪಿ ಸೆಂಟ್ರಲ್ ತನಿಖೆ ಮಾಡ್ತಾ ಇದ್ದಾರೆ. ಎಲ್ಲೆಲ್ಲಿ ಪೋಸ್ಟರ್ ಹಾಕಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೀವಿ. ಕರ್ನಾಟಕ ಪಬ್ಲಿಕ್ ಪೋಸ್ಟ್ ಡಿಸ್ಪಿಗರ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ವಿವರಿಸಿದ್ದಾರೆ. ಇನ್ನು ‘ಪೇ ಸಿಎಂ’ ಪೋಸ್ಟರ್​ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

ನಾಳೆ ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ಏಕವಚನದಲ್ಲಿ ಮಾತಾಡಿ ಎಚ್​ಡಿಕೆಯನ್ನು ಕೆಣಕಿದ ಸಚಿವರಿಗೆ ಕಾದಿದ್ಯಾ ಗಂಡಾಂತರ?

ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

Sign in to your account
Please enter an answer in digits:one + 16 =
Remember me
