ಬೆಂಗಳೂರು:ರಾಷ್ಟ್ರ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಇನ್ನಿತರ ಕರ್ತವ್ಯ ಸಮಯದಲ್ಲಿ ಪ್ರಾಣತ್ಯಾಗ ಮಾಡುವ ಹುತಾತ್ಮ ಪೊಲೀಸರ ನೆನಪಿಗಾಗಿ ‘ಸಂಸ್ಮರಣ ದಿನ’ ಆಚರಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಬಹುದಿನಗಳ ಕೂಗಾದ ಹುತಾತ್ಮರ ನೆನಪಿಗಾಗಿ ‘ಶಾಶ್ವತ ಸ್ಮಾರಕ’ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಪ್ರತಿಯೊಂದು ಸರ್ಕಾರವೂ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಶಾಶ್ವತ ಸ್ಮಾರಕ ನಿರ್ಮಾಣ ವಿಷಯ ಪ್ರಸ್ತಾಪ ಮಾಡುತ್ತಿದೆ. ದಶಕದ ಹಿಂದೆಯೇ ಕೋರಮಂಗಲ ಕೆಎಸ್​ಆರ್​ಪಿ ಆವರಣ ದಲ್ಲಿ ಶಾಶ್ವತ ಸ್ಮಾರಕ ನಿರ್ವಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಯವರೆಗೂ ಪೂರ್ಣ ಮಾಡುವಲ್ಲಿ ರಾಜ್ಯ ಸರ್ಕಾರ ಅಥವಾ ಪೊಲೀಸ್ ಇಲಾಖೆ ಗಮನ ಹರಿಸಿಲ್ಲ.
2022 ಸೆ.1ರಿಂದ 2023 ಆ.31ರವರೆಗೆ ದೇಶದಲ್ಲಿ ವಿವಿಧ ದರ್ಜೆಯ 189 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲೇ ಪ್ರಾಣತ್ಯಾಗ ಮಾಡಿದ್ದಾರೆ. ಪ್ರತಿವರ್ಷ ಅ.21ರಂದು ಕೆಎಸ್​ಆರ್​ಪಿ ಅಥವಾ ಸಿಎಆರ್ ಮೈದಾನದಲ್ಲಿ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಿ, ಹುತಾತ್ಮರನ್ನು ಸ್ಮರಿಸುವ ಸಂಪ್ರದಾಯ ನಡೆದು ಬಂದಿದೆ.
ಆದರೆ, ಶಾಶ್ವತ ಸ್ಮಾರಕ ನಿರ್ವಣಕ್ಕೆ ಯಾವುದೇ ಸರ್ಕಾರ ಪಣ ತೊಟ್ಟಿಲ್ಲ. ಆರೋಪಿಗಳ ಬಂಧನ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಸಂಚಾರ ದಟ್ಟಣೆ ತಗ್ಗಿಸಲು, ಉಗ್ರರ ವಿರುದ್ಧ ಕಾರ್ಯಾಚರಣೆ ಸೇರಿದಂತೆ ಪ್ರತಿ ದಿನ ಪ್ರಾಣವನ್ನೇ ಪಣಕ್ಕಿಟ್ಟು ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಹೊರಗಿನ ಶತ್ರುಗಳು ದೇಶದ ಮೇಲೆ ದಾಳಿ ಮಾಡದಂತೆ ಸೈನಿಕರು ಸದಾಕಾಲ ಸೇವೆ ಸಲ್ಲಿಸುತ್ತಿದ್ದರೆ ದೇಶದ ಒಳಗಿನ ಶತ್ರುಗಳನ್ನು ಸದೆಬಡಿಯುವಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡುವವರಿಗೆ ಸ್ಮಾರಕ ನಿರ್ವಣವಾಗಿಲ್ಲ ಎಂದು ಪೊಲೀಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದಿನ ಕಾರ್ಯಕ್ರಮ:ಬೆಂಗಳೂರು ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನದಲ್ಲಿ ಪೊಲೀಸ್ ಸಂಸ್ಮರಣ ದಿನ ಆಚರಿಸಲಾಗುತ್ತದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗವಹಿಸಲಿದ್ದಾರೆ.
ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ ಪೊಲೀಸ್ ಪಡೆ: 1959ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್​ಐ ಕರಂ ಸಿಂಗ್ ನೇತೃತ್ವದ 20 ಜನರ ತಂಡ ಕೇವಲ ರೈಫಲ್​ನೊಂದಿಗೆ ಲಡಾಖ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು.
ಇವರ ಪ್ರಾಣತ್ಯಾಗದ ನೆನಪಿನಲ್ಲಿ ರಾಷ್ಟ್ರಾದ್ಯಂತ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು ಪ್ರಾಣತ್ಯಾಗ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವಪೂರ್ವಕವಾಗಿ ಸ್ಮರಿಸಲಾಗುತ್ತದೆ.
ಹುತಾತ್ಮ ಪೊಲೀಸರ ವಿವರ:ರವಿ ಸಿ. ಉಕ್ಕುಂದ್-ಸಿಪಿಐ(ವಿಜಯಪುರ), ಶಬ್ಬಿರ್ ಹುಸೇನ್-ಎಎಸ್​ಐ (ವಿಜಯನಗರ), ಸುಭಾಷ್ ಮಡಿವಾಳ್-ಎಎಸ್​ಐ (ಬೀದರ್), ಕೆ.ಜೈ. ಶ್ರೀನಿವಾಸ್-ಎಎಸ್​ಐ (ಬೆಂಗಳೂರು), ಎಂ. ನಾಗರಾಜು-ಎಎಸ್​ಐ (ಬೆಂ.ನಗರ), ವೆಂಕಟೇಶ್-ಹೆಡ್​ಕಾನ್​ಸ್ಟೆಬಲ್ (ರಾಯ ಚೂರು), ಮೈಸೂರು ಅಲಿಯಾಸ್ ಮಯೂರ್ ಚವ್ಹಾಣ್-ಹೆಡ್ ಕಾನ್​ಸ್ಟೆಬಲ್ (ಕಲಬುರ್ಗಿ), ಕಾರೇಪ್ಪ- ಹೆಚ್​ಕಾನ್​ಸ್ಟೆಬಲ್ (ಕಲಬುರ್ಗಿ), ಎನ್.ಸಿದ್ದೇಶ್ವರ-ಹೆಡ್ ಕಾನ್​ಸ್ಟೆಬಲ್ (ತುಮಕೂರು), ಸಿಕಂದರ್ ನಾಟೀಕರ್- ಹೆಡ್​ಕಾನ್​ಸ್ಟೆಬಲ್ (ವಿಜಯಪುರ), ಎನ್.ಸುರೇಶ್-ಕಾನ್​ಸ್ಟೆಬಲ್ (ಬೆಂಗಳೂರು ನಗರ), ರಮೇಶ್ ಮಲ್ಲಪ್ಪ ಬೊಂಬ್ರಿ-ಕಾನ್​ಸ್ಟೆಬಲ್ (ಬೆಳಗಾವಿ), ಶರಣಬಸಪ್ಪ- ಕಾನ್​ಸ್ಟೆಬಲ್ (ಕಲಬುರ್ಗಿ), ಮಹೇಶ್-ಕಾನ್​ಸ್ಟೆಬಲ್ (ಗದಗ), ನಿಂಗಪ್ಪ-ಕಾನ್​ಸ್ಟೆಬಲ್ (ಗದಗ) ಮತ್ತು ಬಿ.ಎನ್. ಗುಡ್ಡದ್-ಕಾನ್​ಸ್ಟೆಬಲ್ (ಗದಗ)
ಪೊಲೀಸ್ ವಾದ್ಯಗೋಷ್ಠಿ:ಅ.22ರ ಸಂಜೆ 5 ರಿಂದ 6 ಗಂಟೆವರೆಗೂ ವಿಧಾನಸೌಧದ ಮೆಟ್ಟಿಲುಗಳ ಬಳಿ 1 ಮತ್ತು 9ನೇ ಪಡೆ ಕೆಎಸ್​ಆರ್​ಪಿ ತಂಡ, ಲಾಲ್​ಬಾಗ್ ಗ್ಲಾಸ್​ಹೌಸ್​ನಲ್ಲಿ 3 ಮತ್ತು 4ನೇ ಪಡೆ ಕೆಎಸ್​ಆರ್​ಪಿ ತಂಡ ವಾದ್ಯಗೋಷ್ಠಿ ಪ್ರದರ್ಶನ ನಡೆಸಿಕೊಡಲಿದೆ. ಅ.28ರ ಸಂಜೆ 5 ರಿಂದ 6ರವರೆಗೆ ಎಂ.ಜಿ.ರಸ್ತೆ ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ 1 ಮತ್ತು 3ನೇ ಪಡೆ ಕೆಎಸ್​ಆರ್​ಪಿ ತಂಡ ಹಾಗೂ ಕಬ್ಬನ್​ಪಾರ್ಕ್ ಬ್ಯಾಂಡ್​ಸ್ಟಾ್ಯಂಡ್​ನಲ್ಲಿ 3 ಮತ್ತು 4ನೇ ಪಡೆ ಕೆಎಸ್​ಆರ್​ಪಿ ತಂಡ ವಾದ್ಯಗೋಷ್ಠಿ ನಡೆಸಿಕೊಡುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಿದೆ.
‘ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ?’: ಬೆಂಗಳೂರು ಪೊಲೀಸರ ಜತೆ ಪಾಕ್​ ಯುವಕನ ವಾಗ್ವಾದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
