ಮಂಡ್ಯ:ಶಕ್ತಿ ಯೋಜನೆ ಹಿನ್ನೆಲೆ ಬಸ್‌ ಸಾಕಷ್ಟು ಭರ್ತಿಯಾಗಿ ಸಂಚರಿಸುತ್ತಿವೆ. ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್‌ಗಳಲ್ಲಿ ನೂಕುನುಗ್ಗಲು, ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್‌ ಫುಲ್‌ ರಶ್‌ ಇರುವ ಕಾರಣದಿಂದಾಗಿ ಚಲಿಸುತ್ತಿದ್ದ ಬಸ್‌ನಿಂದ ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಇದನ್ನೂ ಓದಿ:ಸಾಲಿಡಾರಿಟಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರಾಯ್ಕೆ
ಚಲುವೇಗೌಡ (75) ಮೃತ ವ್ಯಕ್ತಿ. ಇವರು ಹರಕನಕೆರೆ ಗ್ರಾಮದ ನಿವಾಸಿಯಾಗಿದ್ದರು. ಬಸ್ ರಶ್ ಇದ್ದ ಕಾರಣ ಬಾಗಿಲ‌ ಬಳಿ ನಿಂತಿದ್ದ ವ್ಯಕ್ತಿ ಬಿದ್ದು ಸಾವನ್ನಪ್ಪಿದ್ದಾರೆ.
ಚಲುವೇಗೌಡ ಬಸ್ ರಶ್ ಇದ್ದ ಕಾರಣ ಬಾಗಿಲ‌ ಬಳಿ ನಿಂತಿದ್ದರು. ರಸ್ತೆಯಲ್ಲಿನ ಗುಂಡಿಗೆ ಬಸ್ ಇಳಿಯುತ್ತಿದ್ದಂತೆ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಸ್​​ನಿಂದ ಬಿದ್ದ ರಭಸಕ್ಕೆ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ರಕ್ತ ಸ್ರಾವದಿಂದ ಚಲುವೇಗೌಡ ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಪಘಾತವಾದ ಬಳಿಕ KSRTC ವಿರುದ್ಧ ಸಾರ್ವಜನಿಕ ಆಕ್ರೋಶವ್ಯಕ್ತವಾಗುತ್ತಿದೆ.  ದುರ್ಘಟನೆ ನಡೆದಿರೋದಕ್ಕೆ ಬಸ್​​ನಲ್ಲಿ ಡೋರ್‌ ಇಲ್ಲದೇ ಕಾರಣ. KSRTC ನಿರ್ಲಕ್ಷ್ಯತೆಯಿಂದ ಪ್ರಾಣ ಹೋಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬರುವವರೆಗೆ ಬಸ್ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ…ಫ್ರೀ ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಅಕ್ಕ-ತಂಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + six =
Remember me
