
ಬೆಂಗಳೂರು: ಮನಸಲ್ಲಿ ಎಷ್ಟು ಕ್ರೌರ್ಯ ತುಂಬಿದ ಜನರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಶಂಕರನಗರದಲ್ಲಿ ನಡೆದ ಘಟನೆಯ ದೃಶ್ಯವನ್ನು ನೋಡಿದರೆ ಒಂದು ಕ್ಷಣ ನಡುಕ ಹುಟ್ಟದೆ ಇರದು.
ಶಂಕರೇಗೌಡ ಎಂಬುವರು ಕಾರಿಗೆ ಡೀಸೆಲ್​ ಹಾಕಿಸುತ್ತ ನಿಂತಿದ್ದರು. ಇದೇ ವೇಳೆ ಹಿಂದಿನಿಂದ ಸ್ವಿಫ್ಟ್​ ಕಾರಿನಲ್ಲಿ ಬಂದವರು ಒಂದೇ ಸಮ ಹಾರ್ನ್​ ಹೊಡೆದಿದ್ದಾರೆ. ಆಗ ಶಂಕರೇ​ ಗೌಡ ಅವರು ಹಿಂದೆ ತಿರುಗಿ, ‘ಸರ್​..ಒಂದೇ ನಿಮಿಷ, ಕಾರು ತೆಗೆಯುತ್ತೇನೆ’ ಎಂದಿದ್ದಾರೆ. ಆದರೂ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಶಂಕರೇಗೌಡರ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕಾರು ಹತ್ತಿಸಲೂ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಶಂಕರೇಗೌಡ ಕಾರಿನ ಬ್ಯಾನೆಟ್​ ಮೇಲೆ ಜಂಪ್​ ಮಾಡಿದ್ದಾರೆ.
ಶಂಕರೇಗೌಡರು ಬ್ಯಾನೆಟ್ ಮೇಲೆ ಇದ್ದರೂ ಸಹ ಸ್ವಿಫ್ಟ್ ಕಾರಿನಲ್ಲಿದ್ದ ಪುಂಡರು ಅದೇ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿದ್ದಾರೆ. ಹಾಗೇ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲೆಲ್ಲೋ ಮುಂದೆ ನಿಲ್ಲಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಂಕರೇಗೌಡರು ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://www.facebook.com/VVani4U/videos/291054951935139/?t=1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twenty =
Remember me
