ಬಿಡದಿ:ಆನ್ ಲೈನ್‌ನಲ್ಲಿ ವ್ಯಕ್ತಿಯೊಬ್ಬ ವಿದೇಶಿ ತಳಿಯ ನಾಯಿಯನ್ನು ಕೊಂಡುಕೊಳ್ಳಲು ಹೋಗಿ 43,000 ರೂಪಾಯಿ ಕಳೆದುಕೊಂಡಿರುವ ಘಟನೆ ನಗರದ ಬಾಳಪ್ಪ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ನಿವಾಸಿ ನಿತೇಶ್ ಕುವಾರ್ ಹಣ ಕಳೆದುಕೊಂಡವರು. ಈ-ಮೇಲ್ ಮುಖಾಂತರ ಪರಿಚಯವಾದ ಅಪರಿಚಿತ ವ್ಯಕ್ತಿ ಜರ್ಮನ್ ಮೂಲದ ನಾಯಿಯನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾನೆ. ತದನಂತರ ನಾಯಿಯನ್ನು ತರಿಸಲು ಟ್ರಾನ್ಸ್‌ಪೋರ್ಟ್ ವೆಚ್ಚ, ನಾಯಿಗೆ ಇನ್ಸೂರೆನ್ಸ್ ಹಾಗೂ ಬೋನು ವೆಚ್ಚವೆಂದು 12,500 ರೂಪಾಯಿ ಹಾಗೂ ಇತರ ಸರ್ವೀಸ್ ಚಾರ್ಜ್ ಸೇರಿ 30,500 ರೂಪಾಯಿಯನ್ನು ಡಿ.6ರಂದು ನೆಟ್ ಬ್ಯಾಂಕಿಂಗ್ ಮಾಡುವಂತೆ ಸೂಚಿಸಿದ್ದಾನೆ. ಆತನ ಮಾತಿನಂತೆ ನಿತೇಶ್ ಕುಮಾರ್ ನಡೆದುಕೊಂಡಿದ್ದಾನೆ.
ಹಣವನ್ನು ನೆಟ್​ ಬ್ಯಾಕಿಂಗ್ ಮಾಡಿದ ನಂತರ, ನಾಯಿ ಯಾವಾಗ ಬರುತ್ತದೆ ಎಂದು ಮಧ್ಯವರ್ತಿ ನೀಡಿದ ನಂಬರ್​ಗೆ ಕರೆ ಮಾಡಿದ್ದಾನೆ ನಿತೇಶ್ ಕುಮಾರ್. ಈ ವೇಳೆ ಸರಿಯಾದಿ ಸ್ಪಂದನೆ ಸಿಕ್ಕದೇ ಇದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ನಾಯಿ ಕೊಡುತ್ತೇನೆ ಎಂದು ಹೇಳಿದ್ದ ವ್ಯಕ್ತಿ ನಕಲಿ ನಂಬರ್ ನೀಡಿ ವಂಚಿಸಿದ್ದಾನೆ. ಸದ್ಯ ರಾಮನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
