ಹಾವೇರಿ:ಇಂದು ಹಾವೇರಿಯಲ್ಲಿ ಇನ್ನೊಂದು ಕರೊನಾ ವೈರಸ್​ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.
ಆದರೆ ಹಾವೇರಿಯಲ್ಲಿ ಪತ್ತೆಯಾದ ಸೋಂಕಿತನ ಟ್ರಾವೆಲ್​ ಹಿಸ್ಟರಿ ಸ್ವಲ್ಪ ಭಯ ಹುಟ್ಟಿಸುವಂತಿದೆ. ಅದಿನ್ನೆಷ್ಟು ಜನರಿಗೆ ಈತನಿಂದ ಸೋಂಕು ತಗುಲಿದೆಯೋ ಎಂಬ ಆತಂಕ ಶುರುವಾಗಿದೆ.
ಇದನ್ನೂ ಓದಿ:ರೈಲು ಪ್ರಯಾಣಿಕರೇ ಗಮನಿಸಿ.. ಊಟ, ಹೊದಿಕೆ ನೀವೇ ವ್ಯವಸ್ಥೆ ಮಾಡಿಕೊಳ್ಳಿ
ಮಾವಿನ ಹಣ್ಣಿನ ವ್ಯಾಪಾರಿಯಾಗಿರುವ ಈತ ತನ್ನದೇ ಮಿನಿ ಲಾರಿಯಲ್ಲಿ ನವೀ ಮುಂಬೈನಲ್ಲಿರೋ ವಾಸಿ ಎಪಿಎಂಸಿ ಮಾರುಕಟ್ಟೆಗೆ ಹೋಗಿಬಂದಿದ್ದಾನೆ. ಏ.23, 26 ಮತ್ತು 29ವರೆಗೆ ಮೂರು ಬಾರಿ ಮುಂಬೈಗೆ ಹೋಗಿದ್ದ. ಅದಾದ ಬಳಿಕ ಮೇ 1ರಿಂದ 6ರವರೆಗೆ ಸ್ವಗ್ರಾಮ ಅಂದಲಗಿ, ಹಾನಗಲ್​, ಹನುಮಸಾಗರ, ಶಡಗರವಳ್ಳಿ,ಕೊಪ್ಪರಸಿಕೊಪ್ಪ, ಬೈಲವಾಳ ಸೇರಿ ಒಟ್ಟು 10 ಗ್ರಾಮಗಳಲ್ಲಿ ಸಂಚಾರ ಮಾಡಿದ್ದಾನೆ.
ಇದನ್ನೂ ಓದಿ:ಕರೊನಾ ವಿರುದ್ಧದ ಹೋರಾಟದಲ್ಲಿ ಸಿಎಂಗಳು ಮಾಡಿದ ಕೆಲಸದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಆದರೆ ಮೇ 6ರಂದು ಈತ ಮುಂಬೈಗೆ ಹೋಗಿಬಂದಿದ್ದರ ಬಗ್ಗೆ ಮಾಹಿತಿ ತಿಳಿದ ಆರೋಗ್ಯಾಧಿಕಾರಿಗಳು ಕ್ವಾರಂಟೈನ್​ ಮಾಡಿದ್ದರು. ಈಗ ಆತನಲ್ಲಿ ಸೋಂಕು ದೃಢಪಟ್ಟಿದೆ. ಅವನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 16 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನು ಗುರುತಿಸಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆದರೆ ಈ ಸಂಖ್ಯೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳೂ ಇವೆ.
ಸೋಂಕಿತ ವ್ಯಕ್ತಿಯೊಂದಿಗೆ ಆತನ ತಮ್ಮ ಹಾಗೂ ಮೂವರು ಕ್ಲೀನರ್​​ಗಳು ಕೂಡ ಮುಂಬೈಗೆ ಹೋಗಿಬಂದಿದ್ದಾರೆ. ಅವರೆಲ್ಲರೂ ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ. ಈ ವ್ಯಕ್ತಿಯ ನಿವಾಸದಿಂದ 300 ಮೀಟರ್​ ಪ್ರದೇಶವನ್ನು ಸಂಪೂರ್ಣ ಸೀಲ್​ಡೌನ್​ ಮಾಡಲಾಗಿದೆ. ಅನಗತ್ಯವಾಗಿ ಓಡಾಡಲು ಯಾರನ್ನೂ ಬಿಡುತ್ತಿಲ್ಲ. (ದಿಗ್ವಿಜಯ ನ್ಯೂಸ್​)
ದೆಹಲಿ ಹುಡುಗರ ಅಶ್ಲೀಲ ಚಾಟ್​ ಪ್ರಕರಣಕ್ಕೆ ಟ್ವಿಸ್ಟ್​; ಶಾಕಿಂಗ್​ ಸತ್ಯ ಬಿಚ್ಚಿಟ್ಟ ಪೊಲೀಸರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 3 =
Remember me
