ಬಳ್ಳಾರಿ:2023 ಕ್ಕೆ ವಿಧಾಯ ಹೇಳಿ 2024 ರ ಹೊಸ ವರ್ಷವನ್ನ ಭರ ಮಾಡಿಕೊಳ್ಳಲು ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಸಹೋದರರಿಬ್ಬರು ಹೋಗಿದ್ದ ವೇಳೆ ಬೇಕರಿಯೊಂದರ ಬಳಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿಚಾಕು ಇರಿದು ಓರ್ವ ಕೊಲೆಯಾದ  ಘಟನೆ ಗಣಿನಾಡು ಬಳ್ಳಾರಿ ನಗರದ ವಡ್ಡರಬಂಡೆಯಲ್ಲಿ ನಡೆದಿದೆ.
ಸೈಯದುಲ್ಲಾ (24) ಮೃತಪಟ್ಟಿದ್ದು, ಮತ್ತೋರ್ವ ಬಾಪೂಜಿ ನಗರದ ನಿವಾಸಿ ರಜಾಕ್ ವಲಿ (26) ತೀವ್ರ ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆರ್.ಕೆ.ಕಾಲೋನಿಯ ನಿವಾಸಿಗಳಾಗಿದ್ದಾರೆ.

ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಮೂಲಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಮೃತಪಟ್ಟ ಸೈದುಲ್ಲಗೆ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಚಾಕು ಇರಿದ ಪರಿಣಾಮ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದರೆ, ಇನ್ನೊರ್ವ ರಜಾಕ ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಚಾಕು ಇರಿತವಾಗಿದ್ದು ಆತನು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ.

ಘಟನೆ ಸಂಬಂಧ ಬ್ರೂಸ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ.
ಮುಂಬೈನಲ್ಲಿ 70.83 ಕೋಟಿ ರೂ. ಬೆಲೆ ಬಾಳುವ ಬಂಗಲೆ ಖರೀದಿಸಿದ ಬಾಲಿವುಡ್ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
