ಚಿಕ್ಕಬಳ್ಳಾಪುರ:ಸೊಂಟದಲ್ಲಿ ಚಾಕು ಇರಿಸಿಕೊಂಡು ಜನರ ಗುಂಪಿನಲ್ಲಿ ಅನುಮಾನಾಸ್ಪದವಾಗಿ ಸಚಿವರತ್ತ ಧಾವಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ಈ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದುಕೊಂಡು ಸಚಿವರತ್ತ ನುಗ್ಗಿದ್ದು ಪೊಲೀಸರ ಚುರುಕುಮತಿಯ ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ ತಪ್ಪಿಹೋಗಿದೆ. ಈ ಸಂಬಂಧ ಗಂಗರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಇಂದು ಈ ಗ್ರಾಮದಲ್ಲಿ ಕಾರು ಏರಿ ಹೊರಡಲು ಅನುವಾದ ಸಂದರ್ಭದಲ್ಲಿ ಜನರ ಗುಂಪಿನಲ್ಲಿ ಈ ವ್ಯಕ್ತಿ ಅವರತ್ತ ಧಾವಿಸಿದ್ದ. ಆಗ ಈತನ ಹೊಟ್ಟೆಗೆ ಪೊಲೀಸರೊಬ್ಬರ ಕೈ ತಾಕಿದಾಗ ಒಳಗೆ ಸಿಕ್ಕಿಸಿಕೊಂಡಿದ್ದ ಡ್ರ್ಯಾಗನ್ ಚಾಕು ತಾಕಿದೆ. ಆಗ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಗಲಾಟೆಯಾಗಿತ್ತು. ಹೀಗಾಗಿ ಸವರ್ಣೀಯ ವ್ಯಕ್ತಿ ಈತನಿಗೆ ಬೆದರಿಕೆ ಹಾಕಿದ್ದು, ಟ್ರ್ಯಾಕ್ಟರ್ ಹತ್ತಿಸಿ ಸಾಯಿಸುವುದಾಗಿ ಹೆದರಿಸಿದ್ದ. ಅದೇ ಕಾರಣಕ್ಕೆ ಈತ ಪ್ರಾಣಭಯದಿಂದ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತ ವ್ಯಕ್ತಿ ಸಚಿವರ ಬೆಂಬಲಿಗನಾಗಿಯೂ ಗುರುತಿಸಿಕೊಂಡಿದ್ದು, ಗುಡಿಬಂಡೆ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..

ಸ್ನಾನಕ್ಕೆಂದು ತೆರಳಿದಾಗಲೇ ಕುಸಿದ ಮನೆ; ಆ ಸಮಯದಲ್ಲಿ ಏಕಾಂಗಿಯಾಗಿದ್ದ ಮಹಿಳೆ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
