ಆನೇಕಲ್:ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊವಿಡ್​-19 ಸೋಂಕಿತ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮೇ 17ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಗೆ ದಾಖಲಾಗಿದ್ದು, ಮೇ 18ರಂದು ಕರೊನಾ ದೃಢಪಟ್ಟಿತ್ತು. ಅಂದಿನಿಂದಲೂ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ:ಮಹಿಳೆಗೆ ಕರೊನಾ ಸೋಂಕು
ಈ ವ್ಯಕ್ತಿ ಫಿಜಿಯೋಥೆರಪಿಸ್ಟ್​ ಆಗಿದ್ದರು. ಮೂಲತಃ ತಮಿಳುನಾಡಿನ ವೇಲೂರಿನ ಬಾಗಾಯಾಮ್ ಗ್ರಾಮದ ಸಂಜೀವಿನಪುರದವರಾಗಿದ್ದು, ಹಲವು ವರ್ಷಗಳಿಂದಲೂ ಬೆಂಗಳೂರಿನ ಅಪಾರ್ಟ್​ಮೆಂಟ್​ವೊಂದರಲ್ಲಿ ಪತ್ನಿ, ಮಗು ಜತೆ ವಾಸವಾಗಿದ್ದರು. ಲಾಕ್​ಡೌನ್​ಗೂ ಮೊದಲು ಅಂದರೆ ಮಾರ್ಚ್​ನಲ್ಲಿ ಇವರೆಲ್ಲ ಊರಿಗೆ ಹೋಗಿದ್ದರು. ಮೇ 8ರಂದು ಕೇರಳ ರಿಜಿಸ್ಟರ್​ ಕಾರಿನಲ್ಲಿ ವೇಲೂರಿನಿಂದ ಅತ್ತಿಬೆಲೆ ಮೂಲಕ ಅನಂತನಗರಕ್ಕೆ ಬಂದಿದ್ದ. ಅನಂತನಗರದಿಂದ ಚಂದಾಪುರ ಬಡಾವಣೆ ಸೇರಿ, ಹಲವು ಕಡೆ ಸಂಚರಿಸಿದ್ದ.
ಈ ವ್ಯಕ್ತಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಅವರು ವಾಸವಾಗಿದ್ದ ಅಪಾರ್ಟ್​ಮೆಂಟ್​ ಸೀಲ್​ಡೌನ್ ಆಗಿತ್ತು. ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ, ಸೆಕ್ಯೂರಿಟಿ, ಮನೆ ಕೆಲಸದಾಕೆ ಬಂದಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ 200 ಮಂದಿ ವಾಸಾಗಿದ್ದಾರೆ. ಸದ್ಯ ಅಲ್ಲಿ 100 ಮೀಟರ್ ಪ್ರದೇಶ ಸಂಪೂರ್ಣ ಸೀಲ್​ಡೌನ್ ಆಗಿದೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ತನ್ನ ಈ ಅಂಗದ ಫೋಟೋ ಮಾರಾಟ ಮಾಡಿಯೇ ಭರ್ಜರಿ ಹಣ ಗಳಿಸುತ್ತಿದ್ದಾಳೆ ಮೆಡಿಕಲ್​ ವಿದ್ಯಾರ್ಥಿನಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
