ಮಂಗಳೂರು:ಅಶ್ವತ್ಥ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಚಿತ್ರ ರಚಿಸುವ ಕಲೆ ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿದ್ದು, ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್ ಕಲ್ಲಬೆಟ್ಟು ಅವರು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಚಿತ್ರವನ್ನು ರಚಿಸುವ ಮೂಲಕ ಕೈಚಳಕ ತೋರಿದ್ದಾರೆ.
ಡಾ.ವಿಜಯ ಸಂಕೇಶ್ವರ ಅವರ ಮೇಲಿನ ಪ್ರೀತಿ- ಅಭಿಮಾನದಿಂದ ಅಕ್ಷಯ್ ಈ ಚಿತ್ರ ರಚಿಸಿದ್ದಾರೆ. ಪ್ರಸ್ತುತ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ವೆಕ್ಟರ್ ಆರ್ಟ್ ಮಾದರಿಯಲ್ಲಿ ಸೂಕ್ಷ್ಮವಾಗಿ ಎಲೆಯನ್ನು ಕತ್ತರಿಸಿ ವ್ಯಕ್ತಿಯ ಮುಖದ ಚಿತ್ರ ರಚಿಸಲಾಗುತ್ತದೆ. ಬಳಿಕ ಅದರ ಹಿಂಭಾಗದಲ್ಲಿ ಹಸಿರು ಹೊರತಾದ ಬಣ್ಣದ ಕಾಗದ ಅಥವಾ ಆಕಾಶದ ಕಡೆಗೆ ಹಿಡಿದಾಗ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ. ಇಂಥ ಚಿತ್ರ ರಚಿಸಲು ತಾಳ್ಮೆ ಅಗತ್ಯ. ಈ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆ ಅವರ ಚಿತ್ರವನ್ನು ಅಕ್ಷಯ್ ರಚಿಸಿದ್ದರು. ಅಲ್ಲದೆ, ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಚಿತ್ರ ರಚಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಸಂಕೇಶ್ವರರ ಮೆಚ್ಚುಗೆ
ಅಕ್ಷಯ್ ಕೋಟ್ಯಾನ್ ಅವರ ಕಲೆಗೆ ಡಾ.ವಿಜಯ ಸಂಕೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ಕಲಾಕೃತಿಗಳು ನಿಮ್ಮಿಂದ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
