ಹಾಸನ:ಸುತ್ತೂರು ಮಠದ ಸ್ವಾಮೀಜಿ ಅವರಿಗೆ ಬರೀ ರೇವಣ್ಣ ಅವರ ಮೇಲೆ ಪ್ರೀತಿ ಇದ್ದರೆ ಸಾಲದು. ಅವರ ಮಗನ ಮೇಲೂ ಒಂದಷ್ಟು ಪ್ರೀತಿ, ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ನಾನೂ ಕೂಡ ಬೆಳೆಯಲು ಒಳ್ಳೆಯದಾಗುತ್ತೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀನಂಜುಂಡೇಶ್ವರ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಜ್ವಲ್​ ಭಾಷಣ ಮಾಡುತ್ತಾ, ಇವತ್ತು ನನ್ನದು ಅದೆಂಥಾ ಪುಣ್ಯ ನೋಡಿ. ಶಿವನ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಇವತ್ತು ದೇವರೇ ನನ್ನನ್ನು ಇಲ್ಲಿ ಕರೆಸಿಕೊಂಡು ಆಶೀರ್ವಾದಿಸಿದೆ. ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ನನ್ನನ್ನು ಬರಮಾಡಿಕೊಂಡಿದ್ದೀರಿ. ಎಲ್ಲ ಗುರುಗಳ ಆಶೀರ್ವಾದ ಪಡೆಯಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದರು. ಮಾತು ಎತ್ತಿದರೆ ರೇವಣ್ಣ ಅವರನ್ನೇ ಕರೆಸಿಕೊಳ್ಳುತ್ತಾರೆ. ಗುರುಗಳು ನಮ್ಮನ್ನು ಯಾವತ್ತೂ ಕರೆಸಿಕೊಂಡಿಲ್ಲ, ಇನ್ಮುಂದೆ ನಮ್ಮನ್ನೂ ಕರೆಸಿಕೊಂಡರೆ, ಭಕ್ತಾದಿಗಳಾಗಿ ಮಠಕ್ಕೆ ಬಂದು ಸಣ್ಣಪುಟ್ಟ ಸೇವೆ ಮಾಡುವೆ. ಸುತ್ತೂರು ಮಠದ ಶ್ರೀಗಳು ನನ್ನ ತಂದೆ ರೇವಣ್ಣ ಅವರ ಮೇಲಷ್ಟೇ ಪ್ರೀತಿ ತೋರಬಾರದರು. ಮಗನಾದ ನನ್ನ ಮೇಲೂ ಪ್ರೀತಿ ತೋರಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಪೇದೆ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್: ಇಬ್ಬರು ಪತ್ರಕರ್ತರು, ASI ವಿರುದ್ಧ ಎಫ್​ಐಆರ್​! ಡೆತ್​ನೋಟಲ್ಲಿದೆ ಸ್ಫೋಟಕ ರಹಸ್ಯ

ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್​ ಶೆಟ್ಟಿ ಬಿಚ್ಚಿಟ್ಟ ರೀಲ್​ ಮತ್ತು ರಿಯಾಲಿಟಿ

ಅಪ್ಪು ನೆನಪಲ್ಲಿ ಮತ್ತೆ ಒಳ್ಳೆಯ ಕೆಲಸ ಮಾಡಿದ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
