|ಕೆ.ಎನ್​.ರಾಘವೇಂದ್ರಮಂಡ್ಯಸಂಸದೆ ಸುಮಲತಾ ಅವರು “ಕ್ರೆಡಿಟ್​’ ತೆಗೆದುಕೊಳ್ಳುವ ರಾಜಕಾರಣ ಮುಂದುವರಿಸಿದ್ದು, ಆರ್ಗ್ಯಾನಿಕ್​ ಮಂಡ್ಯ ಸಂಸ್ಥಾಪಕ ಮಧುಚಂದನ್​ ಅವರಿಂದ ಬಗೆಹರಿದಿದ್ದ ಸಮಸ್ಯೆಯನ್ನು ತಾನೇ ಮಾಡಿಸಿದ್ದು ಎಂದೇಳುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾರೋ ಮಾಡಿದ ಕೆಲಸವನ್ನ ತಾನೇ ಮಾಡಿಕೊಂಡಂತೆ ಬಿಲ್ಡಪ್ ಯಾಕೆ ಕೊಡ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯ ತಾಲೂಕಿನ ತಂಡಸನಹಳ್ಳಿ ಗ್ರಾಮದ ಅಂಗವಿಕಲ ಯುವಕ ನೂತನ್​ಗೆ ಚರ್ಮದ ಸಮಸ್ಯೆಯಿಂದಾಗಿ ಎರಡು ವರ್ಷದಿಂದ ಆಧಾರ್​ಕಾರ್ಡ್​ ಸಿಕ್ಕಿರಲಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯ ಸಿಗದಂತಾಗಿತ್ತು. ಈ ಹಿನ್ನೆಲೆಯಲ್ಲಿ ಮಧುಚಂದನ್​ ಅವರು ಸಮಸ್ಯೆ ಬಗ್ಗೆ ಟ್ವಿಟರ್​ನಲ್ಲಿ ಫೋಸ್ಟ್​ ಮಾಡಿದ್ದಲ್ಲದೆ, ಪಿಎಂ ಕಚೇರಿಗೂ ಪತ್ರ ಬರೆದಿದ್ದರು. ಪರಿಣಾಮ, ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿದು ಆಧಾರ್​ಕಾರ್ಡ್​ ಸಂಖ್ಯೆ ಆತನ ಕೈಸೇರಿತ್ತು.
ಈ ಪ್ರಕರಣ ರಾಜ್ಯದ ಗಮನಸೆಳೆದಿತ್ತು. ಅಂಗವಿಕಲನ ಸಮಸ್ಯೆಗೆ ಪಿಎಂ ಕಚೇರಿ ಅಧಿಕಾರಿಗಳು ಸ್ಪಂದಿಸಿದ ರೀತಿ ಹಾಗೂ ಮಧುಚಂದನ್​ ಅವರ ಸಾಮಾಜಿಕ ಕಳಕಳಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಖುದ್ದು ನೂತನ್​ ಕುಟುಂಬದವರೇ ಎರಡು ವರ್ಷದಿಂದ ಅಲೆದರೂ ಯಾವ ಅಧಿಕಾರಿ, ಜನಪ್ರತಿನಿಧಿಯಿಂದ ಸಮಸ್ಯೆ ಬಗೆಹರಿದಿರಲಿಲ್ಲ. ಮಧು ಅವರೇ ಆಧಾರ್​ ಸಂಖ್ಯೆ ಬರುವಂತೆ ಮಾಡಿರುವುದು. ಆದ್ದರಿಂದ ನಮ್ಮ ಕುಟುಂಬ ಅವರಿಗೆ ಋಣಿಯಾಗಿರುತ್ತೇವೆಂದು ಹೇಳಿದ್ದರು. ಈ ಕುರಿತು “ವಿಜಯವಾಣಿ”ಯಲ್ಲಿ ಜೂ.3ರಂದು “ಅಂಗವಿಕಲನಿಗೆ ಆಧಾರ್​ ಕೊಡಿಸಿದ ಪಿಎಂ ಕಚೇರಿ” ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟವಾಗಿತ್ತು. ಇದಾದ ನಂತರ ಸಾರ್ವಜನಿಕ ವಲಯದಲ್ಲಿ ಹೆಚ್ಚು ಸದ್ದು ಮಾಡಿತ್ತು.
ಎಂಪಿ ಫೋಸ್ಟ್​ಗೆ ಟೀಕೆ:ಜೂ. 5ರಂದು ಸಂಸದೆ ಸುಮಲತಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್​ಬುಕ್​ನಲ್ಲಿ ಹಾಕಿರುವ ಫೋಸ್ಟ್​ ಟೀಕೆಗೆ ಗುರಿಯಾಗಿದೆ. “ನೂತನ್​ಗೆ ಆಧಾರ್​ಕಾರ್ಡ್​ ಮತ್ತಿತರ ಸರ್ಕಾರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ಸತತವಾಗಿ ನಡೆದಿತ್ತು. ಅಧಿಕಾರಿಗಳಿಗೆ ನಾನು ಈ ಬಗ್ಗೆ ಮೂರು ತಿಂಗಳಿಂದ ಪರಿಹಾರಕ್ಕೆ ಸೂಚಿಸಿದ್ದೆ. ಪ್ರಧಾನಮಂತ್ರಿ ಗಮನಕ್ಕೆ ತಂದ ಎರಡು ದಿನಕ್ಕೆ ಕಾರ್ಯರೂಪ ಪಡೆದಿದೆ” ಎಂದು ಯುವಕನ ಭಾವಚಿತ್ರದ ಜತೆಗೆ, ಮಾ.17ರಂದು ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ. ಮಧುಚಂದನ್​ ಅವರು ಸಮಸ್ಯೆ ಬಗೆಹರಿಸಿದ್ದಾರೆಂದು ಕುಟುಂಬದವರೇ ಹೇಳಿದ್ದಾರೆ. ಇದರಲ್ಲಿಯೂ ಕ್ರೆಡಿಟ್​ ತೆಗೆದುಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಇಂತಹ ಬಿಲ್ಡಪ್​ಗಳನ್ನು ತೆಗೆದುಕೊಳ್ಳುವುದು ಬೇಡ ಎಂದೆಲ್ಲ ಟೀಕಿಸಿದ್ದಾರೆ.
ಇದು ಮೊದಲೇನಲ್ಲ:ಸಂಸದೆ ಕ್ರೆಡಿಟ್​ ರಾಜಕಾರಣ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೋವಿಡ್​ ಸಮಯದಲ್ಲಿ ಸ್ವಂತ ಹಣದಿಂದ ಆಕ್ಸಿಜನ್​ ಕೊಡಿಸಿದ್ದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸರಿಯಾದ ಸಾಕ್ಷ್ಯ ಒದಗಿಸುವಂತೆ ಜನಪ್ರತಿನಿಧಿಗಳು ಸವಾಲು ಹಾಕಿದ್ದರೂ ಸರಿಯಾಗಿ ಸ್ಪಂದಿಸಿರಲಿಲ್ಲ.
ಇದಲ್ಲದೆ, ಲೋಕಸಭಾ ಚುನಾವಣೆಯಲ್ಲಿ ತಾನು ಗೆಲುವು ಸಾಧಿಸಿದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮೇ 23ರಂದು ಹಾಕಿಕೊಂಡಿದ್ದ ಪೋಸ್ಟ್​ ಕೂಡ ಕ್ರೆಡಿಟ್​ ರಾಜಕಾರಣವೇ ಆಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ತಂದಿರುವುದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆಯುತ್ತಿದ್ದು, ಯಾರೇ ಸಂಸದರಾಗಿದ್ದರೂ ಅನುದಾನ ಬರುತ್ತಿತ್ತು ಎನ್ನುತ್ತಿದ್ದಾರೆ. ತಿಂಗಳಿಗೊಮ್ಮೆ ಅತಿಥಿಯಂತೆ ಬರುವುದನ್ನು ಬಿಟ್ಟು ಕ್ಷೇತ್ರದ ಜನರ ಕಷ್ಟವನ್ನು ಕೇಳುವ ಕೆಲಸ ಮಾಡಲಿ. ಒಂದು ದಿನವೂ ಜಿಲ್ಲೆಯಲ್ಲಿ ವಾಸ್ತವ್ಯ ಇರುವುದಿಲ್ಲ. ಇದಕ್ಕಾಗಿಯೇ ಮಂಡ್ಯ ಜನರು ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರ ಬಳಿ ಸಮಸ್ಯೆ ಹೇಳಿಕೊಳ್ಳುವಂತಾಗಿದೆ ಎಂದು ಟೀಕಿಸುತ್ತಿದ್ದಾರೆ.
ಭರತನಾಟ್ಯ ಮೊದಲ ಪ್ರದರ್ಶನದಲ್ಲೇ ಮೋಡಿ ಮಾಡಿದ ಅಂಬಾನಿ ಭಾವಿ ಸೊಸೆ! ಅತ್ತೆಯಂತೆ ಸೊಸೆಯೂ ಉತ್ತಮ ಕಲಾವಿದೆ

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
