ವಿಜಯನಗರ:ಕುಡಿವ ನೀರಿನ ಟ್ಯಾಂಕ್​ಗೆ ಕಿಡಿಗೇಡಿಗಳು ಕ್ರಿಮಿನಾಶಕ ಗುಳಿಗೆಯುಳ್ಳ ಬಾಟಲಿ ಹಾಕಿ ವಿಕೃತಿ ಮೆರೆದಿದ್ದು, ಸ್ಥಳೀಯರು ಆತಂಕಗೊಂಡ ಘಟನೆ ಹರಪನಹಳ್ಳಿ‌ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಚಿಗಟೇರಿ ಗ್ರಾಮದ ಶಿವನಯ್ಯನ ಕೆರೆಗೆ ಹೋಗುವ ಮಾರ್ಗದಲ್ಲಿರುವ ನೀರು ತುಂಬಿದ ಸಂಪಿಗೆ (ನೆಲ ಮಹಡಿ ಟ್ಯಾಂಕ್) ಮೆಕ್ಕೆಜೋಳಕ್ಕೆ ಹೊಡೆಯುವ‌‌ ಕ್ರಿಮಿನಾಶಕ ಗುಳಿಗೆಗಳುಳ್ಳ ಬಾಟಲಿಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಬಿಸಾಡಿದ್ದಾರೆ. ಇಂದು ಬೆಳಗ್ಗೆ ಗ್ರಾಮಕ್ಕೆ ನೀರು ಬಿಡುವಾಗ ವಾಸನೆ ಬಂದಿದ್ದು, ನೀರುಗಂಟಿ ಸಿದ್ದೇಶ ಅವರು ಸಂಪಿನ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ವಿಷದ ಬಾಟಲಿ ಇರುವುದು ಗೊತ್ತಾಗಿದೆ.ಇದನ್ನೂ ಓದಿರಿರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು
ಕೂಡಲೇ ಗ್ರಾಮಸ್ಥರಿಗೆ ನೀರನ್ನು ಕುಡಿಯದಂತೆ ನೀರಗಂಟಿ ಹೇಳಿದ್ದು, ಗ್ರಾಮಸ್ಥರೆಲ್ಲರೂ ಸಂಗ್ರಹಿಸಿದ್ದ ನೀರನ್ನು ಹೊರ ಚೆಲ್ಲಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೀರುಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ತಾಪಂ ಇಒ ಈಶ್ವರ ಪ್ರಸಾದ್, ಡಿವೈಎಸ್​ಪಿ ಹಾಲಮೂರ್ತಿರಾವ್, ಕುಡಿಯುವ ನೀರು ನೈರ್ಮಲ್ಯ ಎಇಇ ಸಿದ್ದರಾಜು, ಜೆಇ ಗಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್​ ಅಧಿಕಾರಿಗಳಿಗೆ ಶಾಸಕ ಕರುಣಾಕರರೆಡ್ಡಿ ಸೂಚನೆ ನೀಡಿದ್ದಾರೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಚಿಗಟೇರಿ ಪೊಲೀಸ್ ಠಾಣೆಗೆ ಪಿಡಿಒ ಫಕ್ಕೀರಪ್ಪ ದೂರು ನೀಡಿದ್ದಾರೆ.
ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

ಡೆತ್​ನೋಟ್​ ಬರೆದಿಟ್ಟು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆ ಮುಂದೆ ಮಹಿಳೆ ಆತ್ಮಹತ್ಯೆ!

ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
