ಚಾಮರಾಜನಗರ:ಅವರ ವಯಸ್ಸಿನ್ನೂ 34 ವರ್ಷ. ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡಿಕೊಂಡೇ ಪಿಎಸ್​ಐ ಆಗುವ ಗುರಿ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಿತ್ತಿದ್ದರು. ಇವರ ಸಾಧನೆಗೆ ಸಾಥ್ ಕೊಡುವ ಮಡದಿ ಹಾಗೂ ಒಂದು ತಿಂಗಳ ಹಿಂದಷ್ಟೇ ಹುಟ್ಟಿದ ಗಂಡು ಮಗುವಿನೊಂದಿಗೆ ಸುಖಿ ಜೀವನ ನಡೆಸುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ ಎಂದುಕೊಂಡವನ ಬಾಳನಲ್ಲಿ ವಿಧಿ ಬೇರೆಯೇ ಆಟವಾಡಿದೆ. ಕೆಲಸ ನಿರ್ವಹಿಸುತ್ತಲೇ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾರೆ.
ಸಂತೇಮರಹಳ್ಳಿ ಪೊಲೀಸ್ ಠಾಣೆ ಕಾನ್​ಸ್ಟೇಬಲ್ ಪ್ರಸಾದ್(34) ಸೋಮವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಇರಸವಾಡಿಯಲ್ಲಿ ಪತ್ನಿ-ಮಗು ಜತೆ ಪ್ರಸಾದ್ ವಾಸವಿದ್ದರು., ಕರ್ತವ್ಯ ನಿಮಿತ್ತ ಕೆಂಪನಪುರಕ್ಕೆ‌ ಎಎಸ್​ಐ ರಾಜು ಮತ್ತು ಪ್ರಸಾದ್​ ಬೈಕ್​ನಲ್ಲಿ ಹೋಗಿದ್ದರು. ಈ ವೇಳೆ ಕಾರು ಡಿಕ್ಕಿ ಹೊಡೆದಿದೆ. ಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಸಾದ್ ಜತೆ ಬೈಕ್​ನಲ್ಲಿ ಹಿಂದೆ ಕುಳಿತ್ತಿದ್ದ ಎಎಸ್ಐ ರಾಜು ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಮಾಲೀಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸಾದ್​ ಕೆಲ ವರ್ಷದ ಹಿಂದೆ ನಾಗವಳ್ಳಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ತಿಂಗಳ ಮಗು ಇದೆ. ಪ್ರಸಾದ್​ ಸಾವಿಂದ ಕುಟುಂಬ ಕಂಗೆಟ್ಟಿದೆ.
ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + one =
Remember me
