ಬೆಂಗಳೂರು:ಮೀಸಲು ಪಡೆ ಕಾನ್​ಸ್ಟೇಬಲ್​ ನೇಮಕಾತಿ ಪರೀಕ್ಷೆಯನ್ನು ಬದಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿ ಇಲಾಖೆಗೆ ಸೇರಿದ್ದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಹಲಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್​ಆರ್​ಪಿ ಪಡೆ 1ನೇ ಬೆಟಾಲಿಯನ್​ ಸಹಾಯಕ ಕಮಾಂಡೆಂಟ್​ ಎಂ.ಜಿ. ಸುರೇಶ್​ ಈ ಬಗ್ಗೆ ದೂರು ನೀಡಿದ್ದಾರೆ. ಇದರ ಅನ್ವಯ ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕು ದಡೇರಹಟ್ಟಿ ನಿವಾಸಿ ಸಿದ್ದು ಕುರಿ ಎಂಬಾತನ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2020ರ ಮಾರ್ಚ್​ 28ರಂದು ಪೊಲೀಸ್​ ಇಲಾಖೆ ವಿಶೇಷ ಸಶಸ್ತ್ರ ಮೀಸಲು ಪಡೆ ಕಾನ್​ಸ್ಟೇಬಲ್​ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಬದಲಿಗೆ ಲಿಖಿತ ಪರೀಕ್ಷೆ, ದೇಹದಾರ್ಡ್ಯ ಮತ್ತು ಸಹಿಷ್ಣುತೆ ಪರೀಕ್ಷೆಗಳಲ್ಲಿ ಅರ್ಜಿದಾರನ ಬದಲಿಗೆ ಬೇರೊಬ್ಬ ಭಾಗವಹಿಸಿದ್ದಾನೆ ಎಂದು ಬೆಳಗಾವಿ ಕೆಎಸ್​ಆರ್​ಪಿ ಐಜಿಪಿ ಶಂಖೆ ವ್ಯಕ್ತಪಡಿಸಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ನಂತರ ದಾಖಲೆ ಪರಿಶೀಲನೆಗೆ ಮತ್ತು ವೈದ್ಯಕೀಯ ಪರೀಕ್ಷೆಗೆ ಖುದ್ದು ಅಭ್ಯರ್ಥಿಯೇ ಭಾಗವಹಿಸಿದ್ದಾನೆಯೇ? ಅಥವಾ ಬೇರೆ ಅಭ್ಯರ್ಥಿ ಹಾಜರಾಗಿದ್ದಾನೆಯೇ? ಎಂಬುದರ ತನಿಖೆ ನಡೆಸುವಂತೆ ದೂರಿನಲ್ಲಿ ಸುರೇಶ್​ ಮನವಿ ಮಾಡಿದ್ದಾರೆ. ಇದರ ಅನ್ವಯ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಸಹ ಕೆಎಸ್​ಆರ್​ಪಿ ಕಾನ್​ಸ್ಟೇಬಲ್​ ನೇಮಕಾತಿಯಲ್ಲಿ ಬದಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು.
ನಿಮ್ ಬಗ್ಗೆ ಚೆನ್ನಾಗಿ ಗೊತ್ತು… ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ವಾರ್ನಿಂಗ್​ ಕೊಟ್ಟ ರಾಹುಲ್ ಗಾಂಧಿ

ನಿನ್ನ ಹೆಂಡ್ತಿಯನ್ನ ನನ್ನ ಜತೆ ಕಳಿಸು… ಗಂಡನ ಎದುರಲ್ಲೇ ಪರಪುರುಷನ ರಂಪಾಟ! ದುಡುಕಿದ ಪತ್ನಿ, ನಡೆದೇ ಹೋಯ್ತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
