ಚಿಕ್ಕಮಗಳೂರು:ಮಹಾಮಾರಿ ಕರೊನಾ ಸೋಂಕಿನ ಭಯಕ್ಕೆ ಹಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ದುರಾದೃಷ್ಟಕರ. ತನ್ನ ಪ್ರೀತಿ ಪಾತ್ರರರು ಕೋವಿಡ್​ಗೆ ಬಲಿಯಾದ ಇಲ್ಲವೇ ಅವರಿಗೆ ಸೋಂಕು ತಗುಲಿದೆ ಎಂಬ ಸುದ್ದಿ ಕೇಳಿಯೇ ಹಲವರಿಗೆ ಹೃದಯಾಘಾತ ಆಗುತ್ತಿದೆ. ಇಂತಹದ್ದೇ ಘಟನೆ ಕಾಫಿನಾಡಲ್ಲೂ ಸಂಭವಿಸಿದ್ದು, ಪೊಲೀಸ್​ ದಂಪತಿ ಬದುಕಿಗೆ ಕರೊನಾ ಕೊಳ್ಳಿ ಇಟ್ಟಿದೆ.
ನಿವೃತ್ತ ಎಎಸ್ಐ ಬಸವರಾಜ್(68) ಅವರ ಪತ್ನಿ ಜಯಮ್ಮ(60)ಗೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿದ ಬಸವರಾಜ್​ಗೆ ಹೃದಯಾಘಾತವಾಗಿತ್ತು. ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ. ಕರೊನಾ ಸೋಂಕಿನಿಂದ ಪತ್ನಿ ಮೃತಪಟ್ಟರೆ, ಅತ್ತ ಹೃದಯಾಘಾತದಿಂದ ಪತಿ ಕೊನೆಯುಸಿರೆಳೆದರು. ಪತಿ-ಪತಿ ಇಬ್ಬರೂ ಸಾವಲ್ಲೂ ಒಂದಾಗಿದ್ದಾರೆ.
ಒಂದೇ ಶಾಲೆಗೆ ಶಿಕ್ಷಕರಾಗಿದ್ದ ಅಣ್ಣ-ತಮ್ಮ ಇಬ್ಬರೂ ಕರೊನಾಗೆ ಬಲಿ! ಮನಕಲಕುತ್ತೆ ಕುಟುಂಬಸ್ಥರ ಆಕ್ರಂದನ

ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
