ಬೆಂಗಳೂರು:ಆಂಧ್ರಪ್ರದೇಶದ ಚಿತ್ತೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೆಂಗಳೂರಿನ ಶಿವಾಜಿನಗರ ಪೊಲಿಸ್​ ಠಾಣೆಯ ಪ್ರೊಬೇಷನರಿ ಸಬ್​ ಇನ್​ಸ್ಪೆಕ್ಟರ್​ ದೀಕ್ಷಿತ್​ ಅವರನ್ನ ಬುಧವಾರ ಬೆಳಗ್ಗೆ ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಬೆಂಗಳೂರಿನ ಹಾಸ್​ಮ್ಯಾಟ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪಿಎಸ್​ಐ ದೀಕ್ಷಿತ್​ಗೆ, ಬಲಗೈನ ಎರಡು ಮೂಳೆ ಮುರಿದಿರುವ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಡ ಭಾಗದ ರಿಬ್ಸ್​ಗೂ ಹಾನಿ ಉಂಟಾಗಿದೆ. ಶ್ವಾಸನಾಳಕ್ಕೂ ಹಾನಿ ಉಂಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಬಗ್ಗೆ ಶಿವಾಜಿನಗರ ಠಾಣೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಎಸ್​ಐ ಅವಿನಾಶ್​ ಮತ್ತು ತಂಡ ಖಾಸಗಿ ಇನೋವಾ ಬಾಡಿಗೆಗೆ ಪಡೆದು ಆಂಧ್ರಪ್ರದೇಶಕ್ಕೆ ತೆರಳಿತ್ತು. ಡ್ರಗ್ಸ್​ ಪೆಡ್ಲರ್​ಗಳ ಜಾಡು ಹಿಡಿದು ಬಂಧನಕ್ಕೆ ಬೆನ್ನತ್ತಿದ್ದರು. ಆದರೆ, ಕಾರಣಾಂತರದಿಂದ ವಾಪಸ್​ ಬೆಂಗಳೂರಿಗೆ ಹೊರಟ್ಟಿದ್ದರು. ಭಾನುವಾರ(ಜು.24)ರ ಮುಂಜಾನೆ 3.30ರಲ್ಲಿ ಚಿತ್ತೂರಿನಿಂದ ತಿರುಪತಿಗೆ ತೆರಳುವ ಮಾರ್ಗದಲ್ಲಿ ಪೂತಾಲ್ಲಪಟ್ಟು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ತಡೆಗೋಡೆಗೆ ಗುದ್ದಿ, ಅಂದಾಜು 30 ಅಡಿ ಎತ್ತರಕ್ಕೆ ಹಾರಿ, ಪಕ್ಕದ ರಸ್ತೆಗೆ ಪಲ್ಟಿಯಾಗಿತ್ತು. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಎಸ್​ಐ ಅವಿನಾಶ್​(29), ಕಾನ್​ಸ್ಟೇಬಲ್​ ಅನಿಲ್​ ಮುಲಿಕ್(26)​ ಹಾಗೂ ಕಾರು ಚಾಲಕ ಮ್ಯಾಕ್ಸ್​ವೆಲ್​ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದರು.
ಪಿಎಸ್​ಐ ದೀಕ್ಷಿತ್​, ಕಾನ್​ಸ್ಟೇಬಲ್​ ಶರಣಬಸವ(29) ಅವರನ್ನು ಸ್ಥಳೀಯರು ಆಂಬುಲೆನ್ಸ್​ನಲ್ಲಿ ಚಿತ್ತೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದೀಕ್ಷಿತ್(28)​ ಅವರನ್ನ ಸ್ಥಳಾಂತರಿಸಲಾಗಿದೆ. ಕಾನ್​ಸ್ಟೇಬಲ್​ ಶರಣ ಬಸವ ಅವರಿಗೆ ಮರ್ಮಾಂಗದ ಬಳಿ ಗಾಯವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಗುರುವಾರ ಹಾಸ್​ಮ್ಯಾಟ್​ ಆಸ್ಪತ್ರೆಗೆ ಆಗಮಿಸಿದ ಗೃಹ ಸಚಿವರು, ದೀಕ್ಷೀತ್​ರ ಆರೋಗ್ಯಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು. ದೀಕ್ಷೀತ್ ಮತ್ತು ಕುಟುಂಬಕ್ಕೆ ಧೈರ್ಯ ತುಂಬಿದರು.
ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ದುರಂತ ಸಾವು: ಅಪಘಾತದ ಭೀಕರತೆ ಬಿಚ್ಚಿಟ್ಟ ಆಂಧ್ರದ ಪೊಲೀಸ್​ ಅಧಿಕಾರಿ

ಮಧುಚಂದ್ರಕ್ಕೆ ಹೋಗಬೇಕಿದ್ದ ನವವಿವಾಹಿತ ಆಸ್ಪತ್ರೆಗೆ… ತಡರಾತ್ರಿ ಕುಸಿದುಬಿದ್ದ ಮನೆಯ ಗೋಡೆ, ಛಾವಣಿ…

ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
