ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ತಪಾಸಣೆ ನೆಪದಲ್ಲಿ ರಸ್ತೆಯ ಎಲ್ಲೆಂದರಲ್ಲಿ ಸುಮ್​ ಸುಮ್ನೆ ವಾಹನ ತಡೆದು ಪರಿಶೀಲನೆ ನಡೆಸುವಂತಿಲ್ಲ ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಅತ್ತ ದಾಖಲೆ ಪರಿಶೀಲನೆ ನೆಪದಲ್ಲಿ ಕಾರು ಮಾಲೀಕರೊಬ್ಬರಿಂದ ಹಣ ವಸೂಲಿ ಆರೋಪದಡಿ ಹಲಸೂರು ಗೇಟ್​ ಪೊಲೀಸ್​ ಠಾಣೆಯ ಎಎಸ್​ಐ ಮತ್ತು ಮುಖ್ಯಪೇದೆಯನ್ನು ಅಮಾನತು ಮಾಡಲಾಗಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿರುವ ಡಿಜಿಪಿ ಪ್ರವೀಣ್ ಸೂದ್, ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರಿಗೂ ಟ್ಯಾಗ್ ಮಾಡಿದ್ದಾರೆ. ಬೇಕಂತಲೇ ಎಲ್ಲೆಂದರಲ್ಲಿ ವಾಹನ ತಡೆದು ತಪಾಸಣೆ ಮಾಡಲಾಗ್ತಿದೆ ಎಂದು ಸಾರ್ವಜನಿಕರು ಟ್ವೀಟ್​ ಮೂಲಕ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಜಿಪಿ, ಡ್ರಿಂಕ್‌ ಆ್ಯಂಡ್​ ಡ್ರೈವ್​ ಮತ್ತು ರೂಲ್ಸ್‌ ಬ್ರೇಕ್‌ ಮಾಡುವ ವಾಹನಗಳ ಮೇಲೆ ಟ್ರಾಫಿಕ್​ ಪೊಲೀಸರು ನಿಗಾ ಇಡಬೇಕು. ಸಂಚಾರ ನಿಯಮ ಕಣ್ಣಿಗೆ ಕಂಡರೆ ವಾಹನ ತಡೆದು ತಪಾಸಣೆ ಮಾಡಿ. ಆದರೆ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ದಾಖಲೆಗಳ ಪರಿಶೀಲನೆ ವಿಷಯದಲ್ಲಿ ನಿಯಮ ಉಲ್ಲಂಘನೆ ಆಗಿದ್ದಲ್ಲಿ ಸ್ಥಳ, ದಿನಾಂಕ ಹಾಗೂ ಸಮಯ ತಿಳಿಸಿ. ನಾವು ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
I reiterate again… no vehicle SHALL BE STOPPED merely for checking documents unless it has committed a traffic violation visible to the naked eye. Only exception is drunken driving. Have instructed@CPBlr&@jointcptrafficfor its implementation immediately.
— DGP KARNATAKA (@DgpKarnataka)June 27, 2022

ದಾಖಲೆ ಪರಿಶೀಲನೆ ನೆಪದಲ್ಲಿ ಕೇರಳ ಮೂಲದ ಕಾರನ್ನು ತಡೆದ ಹಲಸೂರು ಗೇಟ್​ ಪೊಲೀಸ್​ ಠಾಣೆಯ ಎಎಸ್​ಐ ಮತ್ತು ಮುಖ್ಯಪೇದೆ ಇಬ್ಬರೂ ಕಾರಿನಲ್ಲಿ ಬೇಷನ್​ ಇರುವ ಕಾರಣ ನೀಡಿ 20 ಸಾವಿರ ರೂ. ದಂಡ ಹಾಕುವುದಾಗಿ ಬೆದರಿ ಎರಡೂವರೆ ಸಾವಿರ ಹಣ ವಸೂಲಿ ಮಾಡಿದ್ದಾರೆ ಎಂದು ಕಾರಿನ ಮಾಲೀಕ ಇಮೇಲ್​ ಮೂಲಕ ದೂರು ನೀಡಿದ್ದಾರೆ. ಪರಿಶೀಲನೆ ವೇಳೆ ಅಪರಾಧ ಮೇಲ್ನೋಟಕ್ಕೆ ಸಾಬೀತಾಗಿದ್ದು, ಎಎಸ್​ಐ ಮತ್ತು ಮುಖ್ಯಪೇದೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
The policy of not stopping vehicles for documents checking is a “MUST POLICY”. If any violation of this action will be taken.Today one ASI and one HC from Halsoor gate P.S is suspended for such violation.pic.twitter.com/J2zkCThMOv
— Dr.B.R. Ravikanthe Gowda IPS (@jointcptraffic)June 27, 2022

ಸರ್ಕಾರಕ್ಕೆ ಸುಪ್ರೀಂ​ ನೋಟಿಸ್​: ಉದ್ಧವ್​ ಠಾಕ್ರೆಗೆ ಹಿನ್ನಡೆ, ಶಿಂಧೆ ಬಣಕ್ಕೆ ಬಿಗ್​ ರಿಲೀಫ್​

ಹಾಡಹಗಲೇ ಈಶ್ವರನ ದೇವಸ್ಥಾನದಲ್ಲಿ ಕುಖ್ಯಾತ ರೌಡಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ಮಂಡ್ಯ ಜನ

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
