ಶಿವಮೊಗ್ಗ:ಅಪ್ರಾಪ್ತ ಮಗಳ ಮೇಲೆ ತಂದೆಯೇ ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಶಿವಮೊಗ್ಗದ ಗೋವಿಂದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಗಳ ಸಂಕಟ ತಾಳಲಾರದೆ, ಪತಿಯ ಕೃತ್ಯ ತಡೆಯಲು ಯಾವುದೇ ಮಾರ್ಗ ಕಾಣದೆ ಮಗಳ ಜತೆ ತಾಯಿ ಸಾವಿನ ಮನೆಯ ಕದ ತಟ್ಟಲು ಯತ್ನಿಸಿದ ಮನಕಲಕುವ ಘಟನೆಯೂ ನಡೆದಿದೆ.
ಅಮಾನುಷ ಕೃತ್ಯವೆಸಗಿದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗ್ರಾಮವೊಂದರ ಗೋಣಪ್ಪ(45) ಎಂಬಾತನ ವಿರುದ್ಧ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪೋಸ್ಕೋ ಅಡಿ ಪ್ರಕರಣ ದಾಖಲಾಗಿದೆ. ಗ್ರಾಮಸ್ಥರು ಆರೋಪಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಂದೆ ನಿರಂತರ ಅತ್ಯಾಚಾರ ಎಸಗುತ್ತಿದ್ದರೂ ಬಾಲಕಿ ಭಯದಿಂದ ಮೂರು ವರ್ಷ ಸುಮ್ಮನಿದ್ದಳು. ಆದರೆ, ಒಂದು ದಿನ ಸಂಕಟ ತಾಳಲಾರದೆ ಎಲ್ಲವನ್ನೂ ತಾಯಿಗೆ ವಿವರಿಸಿದ್ದಾಳೆ. ಆದರೆ ಆಕೆಯ ತಾಯಿಗೆ ಪತಿಯ ಕೃತ್ಯ ತಡೆಯಲು ಯಾವುದೇ ಮಾರ್ಗ ಕಂಡಿಲ್ಲ. ಮಗಳಿಗೆ ಮದುವೆ ಮಾಡೋಣವೆಂದರೆ ಆಕೆ ಇನ್ನೂ ಅಪ್ರಾಪ್ತೆ. ಇನ್ನೊಂದೆಡೆ ಪತಿಯ ಪೈಶಾಚಿಕ ಕೃತ್ಯವನ್ನೂ ತಡೆಯಲಾರದ ಅಸಹಾಯಕತೆಯಿಂದ ಆಕೆ ಮಗಳೊಂದಿಗೆ ಆತ್ಮಹತ್ಯೆಗೂ ನಿರ್ಧರಿಸಿದ್ದಳು. ಅಷ್ಟರ ನಡುವೆ ಪುತ್ರಿಗೆ 18 ತುಂಬಲು ಕೆಲವೇ ದಿನಗಳು ಇರುವುದಿಂದ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದಳು. ಮಗಳ ನಿಶ್ಚಿತಾರ್ಥದಿಂದ ಕೆರಳಿದ ಗೋಣಪ್ಪ, ಮದುವೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಹೆದರಿಸಿದ್ದಾನೆ.
ಈ ವಿಷಯ ಹೇಗೋ ಗೋವಿಂದಾಪುರದಲ್ಲಿರುವ ಮಹಿಳೆಯ ತವರು ಮನೆಯವರಿಗೆ ತಿಳಿದಿದೆ. ಕೂಡಲೇ ಅವರು ತಾಯಿ-ಮಗಳನ್ನು ಕರೆದುಕೊಂಡುಬಂದು ರಕ್ಷಣೆ ನೀಡಿದ್ದಾರೆ. ಆದರೆ ಅಷ್ಟಕ್ಕೂ ಸುಮ್ಮನಾಗದ ಗೋಣಪ್ಪ ಗೋವಿಂದಾಪುರಕ್ಕೂ ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ಬೇಸತ್ತ ಸ್ಥಳೀಯರು ಆತನನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿ ಮೂಲಕ ದೂರನ್ನೂ ದಾಖಲಿಸಿದ್ದಾರೆ. ಗೋಣಪ್ಪ ಪೊಲೀಸರ ಅತಿಥಿಯಾಗಿದ್ದು ಅಪ್ರಾಪ್ತೆಗೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ತನ್ನ ಮಗಳಲ್ಲ ಎಂಬ ನೆಪ:ಇನ್ನೊಂದೆಡೆ ಪತ್ನಿಯೊಂದಿಗೆ ಮನಸ್ತಾಪ ಹೊಂದಿದ್ದ ಗೋಣಪ್ಪ, ಮಗಳು ಜನಿಸಿದ ಆರು ವರ್ಷ ಪತ್ನಿಯಿಂದ ದೂರವೇ ಇದ್ದ. ತಾಯಿ-ಮಗಳು ಗೋವಿಂದಾಪುರದ ತವರು ಮನೆಯಲ್ಲೇ ಇದ್ದರು. ಬಳಿಕ ಸಂಬಂಧಿಕರು ಮಾತುಕತೆ ನಡೆಸಿ ಪತಿ-ಪತ್ನಿಯನ್ನು ಒಂದು ಮಾಡಿದ್ದರು. ಕೆಲ ವರ್ಷಗಳ ಹಿಂದೆ ವರ್ತನೆ ಬದಲಿಸಿಕೊಂಡ ಗೋಣಪ್ಪ, ನೀನು ನನ್ನ ಮಗಳೇ ಅಲ್ಲ ಎಂದು ಹೇಳಿ ಅತ್ಯಾಚಾರವೆಸಗುವ ಜತೆಗೆ ದೈಹಿಕವಾಗಿಯೂ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಮಕ್ಕಳಾಗದ ನೋವಿನಲ್ಲಿ ಸಾವಿನ ಮನೆಯ ಕದ ತಟ್ಟಿದ ಮಹಿಳೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen − 7 =
Remember me
