ಶಿವಮೊಗ್ಗ:ಅಪ್ರಾಪ್ತೆ ನಾದಿನಿ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿ ಮಗು ಕರುಣಿಸಿದ್ದ ಬಾವನನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದುರಾದೃಷ್ಟವಶಾತ್ ಪ್ರಸವಪೂರ್ವ ಹೆರಿಗೆಯಾದ ಬಳಿಕ ಮಗು ಮೃತಪಟ್ಟಿದೆ.
ಕುಂಸಿ ಠಾಣಾ ವ್ಯಾಪ್ತಿಯ ಕ್ಯಾಂಟೀನ್‌ವೊಂದರ ಮಾಲೀಕ ಪ್ರವೀಣ್ ಬಂಧಿತ ಆರೋಪಿ. ಪತ್ನಿ ಮನೆಯಲ್ಲಿ ಇಲ್ಲದಾಗ ಆಕೆಯ ತಂಗಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಅಪ್ರಾಪ್ತೆ 6ನೇ ತರಗತಿಯಿಂದ ಅಕ್ಕನ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಅಪ್ರಾಪ್ತೆ ಮೇಲೆ ಬಾವನ ಕಣ್ಣು ಬಿದ್ದಿತ್ತು. ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ.
ತದನಂತರ ಅನಾರೋಗ್ಯದ ಕಾರಣ ಅಕ್ಕ ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಆಕೆ 5 ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಗ ಬಾವ ಪ್ರವೀಣ್ ನಡೆಸಿದ್ದ ಕೃತ್ಯವನ್ನು ಆಕೆ ಕುಟುಂಬದವರ ಮುಂದೆ ಹೇಳಿದ್ದಳು.
7 ತಿಂಗಳಿಗೆ ಹೆರಿಗೆ, ಮಗು ಸಾವು:ಜ.13ರಂದು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ್ದಳು. 7 ತಿಂಗಳಿಗೆ ಮಗು ಜನಿಸಿತ್ತು. ಪ್ರಸವಪೂರ್ವ ಹೆರಿಗೆ ಆಗಿದ್ದರಿಂದ ಅದೇ ದಿನ ಅಪ್ರಾಪ್ತೆಯ ಸಹೋದರ ಶಿಶುವನ್ನು ಮೆಗ್ಗಾನ್ ಆಸ್ಪತ್ರೆ ಐಸಿಯುಗೆ ದಾಖಲಿಸಿದ್ದ. ಈ ವೇಳೆ ಮಗುವಿನ ತಾಯಿಗೆ 19 ವರ್ಷವೆಂದು ವಯಸ್ಸು ನೋಂದಣಿ ಮಾಡಿಸಿದ್ದ. ಅಲ್ಲದೆ, ಆಕೆಯ ಆಧಾರ್ ನಂಬರ್ ಸೇರಿದಂತೆ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಆದರೆ, ಮರುದಿನವೇ ಮಗು ಮೃತಪಟ್ಟಿದ್ದು ಅಪ್ರಾಪ್ತೆ ತಾಯಿ ಸೇರಿದಂತೆ ಕುಟುಂಬದವರು ಆಸ್ಪತ್ರೆಯಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಪೂರ್ಣ ವಿಳಾಸ ನೀಡಿದ್ದ ಕುಟುಂಬಸ್ಥರು:ಅಪ್ರಾಪ್ತೆ ವಿಳಾಸ ಅಪೂರ್ಣವಾಗಿದ್ದರಿಂದ ಪೊಲೀಸರಿಗೂ ತನಿಖೆ ಕೈಗೊಂಡಿದ್ದರು. ಕೊನೆಗೂ ಅಪ್ರಾಪ್ತೆಯ ವಿಳಾಸ ಪತ್ತೆ ಮಾಡಿ ಆಕೆಯ ವಯಸ್ಸನ್ನು ಖಚಿತಪಡಿಸಿಕೊಂಡಿದ್ದರು. ಮಗು ಜನಿಸಿದಾಗ ಆಕೆ ಇನ್ನೂ ಅಪ್ರಾಪ್ತೆ ಎಂಬುದು ದೃಢಪಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದ ಬಾವ ಪ್ರವೀಣ್‌ನನ್ನು ಪೊಲೀಸರು ವಶಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
