ಬೆಂಗಳೂರು:ಜಾಗತಿಕ ಮಟ್ಟದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಾನ ಹರಾಜಾಗಿದೆ. ‘ಅಂದು ಕಸದಿಂದ ಮಾನ ಹೋಯ್ತು, ಇಂದು ರಸ್ತೆಗುಂಡಿಯಿಂದ ಮಾನ ಹೋಯ್ತು’ ಎಂದು ನಾಗರಿಕರು ಅಭಿಯಾನ ಶುರು ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳು ಹದಗೆಟ್ಟಿರುವ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದ್ದು, ‘ರಸ್ತೆಯೋ- ಗುಂಡಿಯೋ?’, ‘ಐಟಿ ಸಿಟಿಯಲ್ಲ, ಇದು ರಸ್ತೆಗುಂಡಿಗಳ ಸಿಟಿ’, ‘ಕೋಟಿ ಕೋಟಿ ತೆರಿಗೆ ಹಣ ಪಾವತಿಸಿದ ಜನರಿಗೆ ಬಿಬಿಎಂಪಿ ಮತ್ತು ಸರ್ಕಾರ ಮಾತ್ರ ಗುಂಡಿ ಭಾಗ್ಯ ಕೊಟ್ಟಿವೆ’, ‘ಸ್ಮಾರ್ಟ್​ ಸಿಟಿ, ಸೂಪರ್​ ಸ್ಮಾರ್ಟ್​ ಗುಂಡಿ’ ಎಂದು ವ್ಯಾಪಕ ಟೀಕೆಗಳು ಬರುತ್ತಿವೆ.
ರಸ್ತೆಗಳ ಗುಂಡಿ ಮುಚ್ಚುವಂತೆ ಎಸ್.​ಎಂ. ಕೃಷ್ಣ ಅವರು ಪತ್ರ ಬರೆದಿದ್ದರು. ಇದೀಗ ಉದ್ಯಮಿಗಳು ಕೂಡ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. ‘ಬೆಂಗಳೂರಿನ ರಸ್ತೆಗಳು ಹದಗೆಟ್ಟು ಹೊಂಡ-ಗುಂಡಿಗಳಿಂದಾಗಿ ಸಾರ್ವಜನಿಕರು ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ಉದ್ಭವಿಸಿದೆ’ ಎಂದು ಇತ್ತೀಚೆಗೆ ಉದ್ಯಮಿ ಮೋಹನದಾಸ್​ ಪೈ ಅವರು ಹದಗೆಟ್ಟ ರಸ್ತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಉದ್ಯಮಿ ಕಿರಣ್​ ಮಜುಂದಾರ್​ ಷಾ ಅವರು ‘ಆನೇಕಲ್​ ತಾಲೂಕಿನ ಹುಸ್ಕೂರು-ಸರ್ಜಾಪುರ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಷ್ಟು ಹದಗೆಟ್ಟಿವೆ. ಸ್ಥಳೀಯ ಶಾಸಕ, ಸಂಸದರು ಮತ್ತು ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು. ಹುಸ್ಕೂರು ಗ್ರಾಪಂ ಆಡಳಿತ ಮಂಡಳಿ ಉತ್ತಮ ರಸ್ತೆ ಸೌಕರ್ಯ ಕಲ್ಪಿಸಿಲ್ಲ. ಆನೇಕಲ್​ ಶಾಸಕ ಮತ್ತು ಕ್ಷೇತ್ರದ ಸಂಸದರಿಗೆ ಜವಾಬ್ದಾರಿ ಇಲ್ಲ. ಹುಸ್ಕೂರು-ಸರ್ಜಾಪುರ ರಸ್ತೆ ಪರಿಸ್ಥಿತಿ ಶೋಚನೀಯವಾಗಿದೆ’ ಎಂದು ಟ್ವಿಟರ್​​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ‘ಉತ್ತಮ ರಸ್ತೆಯ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರ ಏಕೆ ಬಸ್​ ಡಿಪೋ ಮತ್ತು ವಸತಿ ಗೃಹಗಳನ್ನು ನಿರ್ಮಿಸಬೇಕಿತ್ತು?’ ಎಂದು ಕಿರಣ್​ ಮಜುಂದಾರ್​ ಷಾ ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
Frustrated n angry at the total lack of responsibly of our MLA, Panchayat n MP of Anekal Taluka n Huskur Gram Panchayat at the abominable condition of Huskur -.Sarjapur Road Why does Govt build bus depot n quarters with no road to support it? Shame on all the local politicians
— Kiran Mazumdar-Shaw (@kiranshaw)June 6, 2022

ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಮಾತ್ರವಲ್ಲ, ವಾಹನ ಸವಾರರು ನಿತ್ಯ ಬೇಸರ ಹೊರಹಾಕುತ್ತಲೇ ಇದ್ದಾರೆ. ಮೃತ್ಯುಕೂಪದಂತೆ ರಸ್ತೆಯಲ್ಲಿ ಬಾಯ್ತೆರೆದ ಗುಂಡಿಗಳನ್ನು ನೋಡಿ ಜೀವಭಯದಲ್ಲೇ ನಿತ್ಯ ಪ್ರಯಾಣಿಸುತ್ತಿದ್ದಾರೆ. ಮಳೆಗಾಲ ಶುರುವಾಗಿದೆ. ಅಪಾಯ ಕಟ್ಟಿಟ್ಟ ಬುಟ್ಟಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ ಶೀಘ್ರವೇ ಸರಿ ಆಗುತ್ತೆ, ಮಳೆ ಬಂದಿದೆ ಅಲ್ವಾ ಅದಕ್ಕೆ ಹೀಗಾಗಿದೆ ಅಂತಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಸಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಇಷ್ಟೊಂದು ಅದ್ಭುತವಾದ ರಸ್ತೆಗಳನ್ನು ನೋಡಲು ಡಬಲ್ ಇಂಜಿನ್ ಬಿಜೆಪಿ ಸರ್ಕಾರನೇ ಬರಬೇಕಾಯಿತು.
Smart city…..super smart roadspic.twitter.com/A8DU5Cqv8q
— Praveen Kanagal (@kanagal)June 7, 2022

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ: ದೇವೇಗೌಡರ ಮರಿಮೊಮ್ಮಗನ ಹೆಸರು ಹೀಗಿದೆ

ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
