ಹಾವೇರಿ:ಧಾರಾಕಾರ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ದ ಗ್ರಾಮಕ್ಕೆ ಕೆಇಬಿ ಪವರ್​ಮನ್​ವೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​​ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಚಿಕ್ಕೊಣತಿ ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದ್ದು, ವಿದ್ಯುತ್​ ಕಂಬ ಸೇರಿದಂತೆ ಇಡೀ ಪ್ರದೇಶ ಜಲಾವೃತವಾಗಿ ವಿದ್ಯುತ್​ ಸಂಪರ್ಕ ಕಡಿತಗೊಂಡಿತ್ತು. ಪವರ್​ಮನ್​ ಮುಕೇಶ ಪಾಟೀಲ್ ಎಂಬುವರು ನೀರಲ್ಲಿ ಈಜಿಕೊಂಡು ಹೋಗಿ ವಿದ್ಯುತ್​ ಕಂಬವನ್ನೇರಿ ಲೈನ್ ಕಟ್ ಮಾಡಿ ಬೇರೆ ಮಾರ್ಗಕ್ಕೆ ವಿದ್ಯುತ್​ ಸಂಪರ್ಕ ಕೊಡುವ ಮೂಲಕ ಕತ್ತಲಲ್ಲಿ ಇರಬೇಕಿದ್ದ ಸಾತೇನಹಳ್ಳಿ ಹಾಗೂ ಮಡ್ಲೂರ ಗ್ರಾಮಕ್ಕೆ ಬೆಳಕು ನೀಡಿದರು. ಮುಕೇಶ​ರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಈ ದೃಶ್ಯವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿಕೊಂಡು ಶುಭ ಹಾರೈಸಿದ್ದಾರೆ.
VIDEO| ಉತ್ತರಕನ್ನಡದಲ್ಲಿ ಪ್ರವಾಹ: ನೋಡ ನೋಡುತ್ತಿದ್ದಂತೆ ಕುಸಿಯುತ್ತಿವೆ ಮನೆಗಳು…

VIDEO| ಮಳೆ ನೀರಲ್ಲಿ ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ!

Sign in to your account
Please enter an answer in digits:twenty − 2 =
Remember me
